ಗೆಜ್ಜೆಪೂಜೆ ನೃತ್ಯ ಪ್ರದರ್ಶನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.03: ಸೂರ್ಯ ಕಲಾ ಟ್ರಸ್ಟ್ (ರಿ)ವತಿಯಿಂದ ಬಳ್ಳಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಪ್ರಯೋಜಕತ್ವದಡಿಯಲ್ಲಿ ಗೆಜ್ಜೆಪೂಜೆ ನೃತ್ಯ ಪ್ರದರ್ಶನ 1ಭಾನುವಾರ ಸಂಜೆ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ  ನಡೆಯಿತು.
ಕಾರ್ಯಕ್ರಮಕ್ಕೆ ಬಿಐಟಿಎಂ ಸೆಕ್ಷನ್ ಆಫೀಸರ್ ಎಲ್. ರಘುನಾಥ್ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿ ಗಳಾಗಿ ಶ್ರೀಮತಿ ಪಿ ಶ್ರೀಲತಾ ಆರ್ ರಾವ್.  ಮಂಜುನಾಥ ಗೋವಿಂದ ವಾಡ ಕಲಾ ನಿರ್ದೇಶಕರು ಡಾII ರಾಧಕೃಷ್ಣ… ಮಂಜುನಾಥ್. ಅಧ್ಯಕ್ಷರು ಅಪ್ಪು ಸೇವಾ ಸಮಿತಿ  ಉಪಸ್ಥಿತರಿದ್ದರು.
ಸಮೂಹ ನೃತ್ಯ ಕುಮಾರಿ ಭವ್ಯ, ಪಿ ಮತ್ತು ತಂಡ ಪ್ರಸ್ತುತಪಡಿಸಿದರು. ಯುಗಳ ನೃತ್ಯ ಹೆಚ್. ರಕ್ಷಿತ ಮತ್ತು ತಂಡ ನಡೆಸಿಕೊಟ್ಟರು.  ಗೆಜ್ಜೆಪೂಜೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ವಾದ್ಯಗಾರರಾಗಿ ಹಿಮ್ಮೇಳದಲ್ಲಿ ವೃದಂಗದಲ್ಲಿ ವಿದ್ವಾನ್ ಶ್ರೀ ಬೈಲು ಪಾಟಿ ಕೆ.ಸುಧಾಕರ್ ಹಾಗೂ ನಟ ವಾಂಗದಲ್ಲಿ  ಅಭಿಷೇಕ್  ನೃತ್ಯ ಗುರುಗಳು ಸಹಕರಿಸಿದರು.
ಶ್ರೀಮತಿ ರಕ್ಷಾ ರಫನಾಥ್ ಹಾಗೂ ಸಿ ಕೆ ವಿಂದೇಶ್ವರಿ ಅಭಿಷೇಕ್ ಪ್ರಾರ್ಥನೆ ಗೀತೆಯನ್ನು ನೆರವೇರಿಸಿದರು. ನಿರೂಪಕಿಯಾಗಿ ಶ್ರೀಮತಿ ಬಿ. ರೂಪಶ್ರೀ ನಿರ್ವಹಿಸಿದರು.