ಗಣಿತ ಕಲಿಕಾ ಆಂದೋಲನ
ಬಾದಾಮಿ, ಸೆ3: ತಾಲೂಕಿನ ಕಾತರಕಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಕಾತರಕಿ ಗ್ರಾಮ ಪಂಚಾಯಿತಿ ಮಟ್ಟದ 7 ಗ್ರಾಮದ 7 ಸರ್ಕಾರಿ ಶಾಲೆಗಳ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಕಾತರಕಿ ಗ್ರಾ.ಪಂ.ಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮನಗೌಡ ಅಯ್ಯನಗೌಡ್ರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಗ್ರಾ.ಪಂ. ಉಪಾಧ್ಯಕ್ಷ ಮಲ್ಲಪ್ಪ ಪೂಜಾರ್ ಉದ್ಘಾಟಿಸಿದರು.
ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಶಿಕ್ಷಕ ಆರ್.ಎಂ.ಸಾರವಾಡ ಮಾತನಾಡಿ ಗಣಿತ ವಿಷಯ ಮಕ್ಕಳಿಗೆ ಕಬ್ಬಿಣದ ಕಡಲೆ. ಆದಕಾರಣ ಸರ್ಕಾರ ಕ್ಲಿಷ್ಟಕರವಾದ ವಿಷಯವನ್ನು ಸರಳಿಕರಣಗೊಳಿಸಲು ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಲು 4, 5, 6, ತರಗತಿಗಳಿಗೆ ಗಣಿತ ಕಲಿಕಾ ಆಂದೋಲನದ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಗೆ ಟ್ರೇಜರಿ ಕೊಡುಗೆಯನ್ನು ಕೊಟ್ಟ ಶಿಕ್ಷಕ ಎಸ್.ಎಸ್.ಲೋಣಿ ಹಾಗೂ ಡಯಾಸ್ ಕೊಡುಗೆ ಕೊಟ್ಟ ಶಿಕ್ಷಕ ಐ.ಎ.ಸೋಲಾಪುರ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಗ್ರಾ.ಪಂ.ಸದಸ್ಯರಾದ ಅಂದಾನ ಗೌಡ ಪಾಟೀಲ್, ಮುತ್ತು ವಾಲ್ಮೀಕಿ, ಪಿಡಿಒ ಆರ್.ಎಸ್.ದೊಡಮನಿ, ಕಾರ್ಯದರ್ಶಿ ಗಾಣಿಗೇರ, ಗ್ರಾ.ಪಂ.ಸಿಬ್ಬಂದಿ ಸಯ್ಯದ್ ಕೆರೂರ, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಟಿ.ಪಟ್ಟಣಶೆಟ್ಟಿ, ತಾಲೂಕಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಪಿ.ಆರ್.ಚಿಕ್ಕಣ್ಣವರ, ಮಣ್ಣೇರಿ ಶಾಲೆಯ ಮುಖ್ಯಶಿಕ್ಷಕ ಆರ್.ಆರ್.ಹೊಸೂರ, ನೀರಲಗಿ ಶಾಲೆಯ ಮುಖ್ಯಶಿಕ್ಷಕ ಎ.ಜಿ.ಅಂಬಿಗೇರ, ಸಹಶಿಕ್ಷಕರಾದ ಎಸ್.ಆರ್. ಕಾತರಕಿ, ಎಚ್.ಎನ್. ನರಸಾಪುರ, ಐ.ಎ.ಸೋಲಾಪುರ, ಎಸ್.ಎಸ್.ಲೋಣಿ, ನಾಗರಾಜ ಹೊಸೂರ, ಕ್ರುಣಾಲ್ ಮಣ್ಣೂರ, ಎಸ್.ಬಿ.ಲಾಂಡೆ, ಯಮನೂರ ಮಾದರ, ವೈ.ಸಿ.ಬಸರಿ, ಸಹಶಿಕ್ಷಕಿಯರಾದ ಎಲ್.ಎಸ್.ಗುಮಾಸ್ತೇ, ಎಸ್.ಬಿ.ಗಾಣಿಗೇರ, ಎ.ಎಸ್. ಹಿರೇಮಠ, ಶಂಕ್ರಮ್ಮ ಮಂಗಳೂರು, ಗಿರಿಜಾ ದಳವಾಯಿ, ಸುವರ್ಣ ಹೂಗಾರ, ಪದ್ಮಾವತಿ ಕೋಳಿವಾಡ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸುಧಾ ಗೌಡರ ಪ್ರಾರ್ಥನೆ ಹಾಡಿದರು. ಎಚ್.ಎನ್.ಸೋಲಾಪೂರ ಸ್ವಾಗತಿಸಿದರು. ಶಿಕ್ಷಕ ನಾಗರಾಜ್ ಹೊಸೂರ್ ನಿರೂಪಿಸಿದರು. ಐ.ಎ.ಸೋಲಾಪುರ ವಂದಿಸಿದರು.