ಭಾರತ್ ಸ್ಕೌಟ್ಸ್ – ಗೈಡ್ಸ್ ವಾರ್ಷಿಕ ಸಭೆಯಲ್ಲಿ ದಿನೇಶ್ ಕೆ ಶೆಟ್ಟಿ ಅವರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.3; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆಯ ಡಿ ಆರ್ ಎಂ ಸ್ಕೌಟ್ ಭವನದಲ್ಲಿ ಕಾರ್ಯಕಾರಿ ಸಮಿತಿ ಸಭೆಯನ್ನು ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೆ ಚಿಗಟೇರಿ ಅಧ್ಯಕ್ಷತೆಯಲ್ಲಿ  ನಡೆಯಿತು. ವಿಷಯಗಳ ಚರ್ಚೆ, ಹಿಂದಿನ ಸಭೆಯ ನಡಾವಳಿಗಳನ್ನು ಜಿಲ್ಲಾ ಕಾರ್ಯದರ್ಶಿ ರತ್ನ  ಓದಿದರು.  2023- 24ನೇ ವಾರ್ಷಿಕ ವರದಿಯನ್ನು   ಎಸ್. ಜಿ. ವಿ. ಅಶ್ವಿನಿ ಮಂಡಿಸಿದರು.2023-24 ನೇ ಸಾಲಿನ ಜಮಾ ಖರ್ಚಿನ ಮಂಡನೆಯನ್ನು ಮತ್ತು 2024- 25 ನೇ ಸಾಲಿನ ಆಯಾವ್ಯಯವನ್ನು  ಜಿಲ್ಲಾ ಖಜಾಂಚಿಗಳು ಬೂಸನೂರು ವಿಶ್ವನಾಥ್  ಮಂಡಿಸಿದರು.2024- 25ನೇ ಸಾಲಿನ ಉದ್ದೇಶಿತ ವಾರ್ಷಿಕ ಚಟುವಟಿಕೆಗಳ ಬಗ್ಗೆ    ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತರು ಡಿ ಹಾಲಪ್ಪ ಓದಿದರು.    ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಮತ್ತು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ  ನೂತನ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರನ್ನು ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.   ದಾವಣಗೆರೆ ಜಿಲ್ಲೆಯ ಸ್ಕೌಟ್ ಸಂಸ್ಥೆಯು ಉತ್ತಮ ಕಾರ್ಯಕ್ರಮಗಳನ್ನು ಹಾಗೂ ಅನೇಕ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದೆ  ಎಂದು ಹರ್ಷ ವ್ಯಕ್ತ ಪಡಿಸಿದರು.