ಮೂಡಾ ಹಗರಣ; ಸಿಎಂ ಸಿದ್ದರಾಮಯ್ಯ ಆರೋಪ ಮುಕ್ತರಾಗಲಿದ್ದಾರೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೩; ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಒಬ್ಬ ಸ್ವಚ್ಛ ರಾಜಕಾರಣಿ 40 ವರ್ಷಗಳಿಂದ ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಯಾಗಿ ಜನರ ಸೇವೆ ಮಾಡಿದ್ದಾರೆ. ಸಿದ್ದರಾಮಯ್ಯ ನವರು ಬಡವರ ಪಾಲಿನ ಭಾಗ್ಯವಿದಾತ, ಹಸಿದವರಿಗೆ ಅನ್ನ ನೀಡಿದ ಸಿ ಎಂ ಸಿದ್ದರಾಮಯ್ಯ ನವರಿಗೆ  ಹೈ ಕೋರ್ಟ್ ನಲ್ಲಿ ನ್ಯಾಯ ಸಿಗಲಿದೆ. ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸಿಎಂ ರಕ್ಷಣೆಗೆ ನಿಲ್ಲುವಳು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆಶಯ ವ್ಯಕ್ತ ಪಡಿಸಿದ್ದಾರೆ. ಹೈ ಕೋರ್ಟ್ ನಲ್ಲಿ ನಡೆಯುತ್ತಿರುವ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನವರ ಪಾತ್ರ ರೂಪಿಸುವ ಯಾವುದೇ ವಾದ ವನ್ನು ವಕೀಲರು ನಿರೂಪಿಸಿಲ್ಲ. ಆದುದರಿಂದ ಸಿದ್ದರಾಮಯ್ಯ ನವರು ಆರೋಪದಿಂದ ಮುಕ್ತರಾಗಲಿದ್ದಾರೆ ಬಿಜೆಪಿ ಜೆಡಿಎಸ್ ಮೋದಿ ಪಾಟಾಲಂ ಗೆ ಕಪಾಲ ಮೋಕ್ಷವಾಗಲಿದೆ ಎಂದು ಡಿ. ಬಸವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.