ಹೊಸತನದ ತಂತ್ರಜ್ಞಾನದ ಬಳಕೆಯಿಂದ ಪ್ರಕರಣ ಪತ್ತೆಹಚ್ಚಲು ಪೋಲೀಸರಿಗೆ ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೩; ಅಪರಾಧಗಳ ಪತ್ತೆ ಹಚ್ಚುವುದರೊಂದಿಗೆ ಸೂಕ್ತ ಸಾಕ್ಷಿ ಹಾಗೂ ಆಧಾರಗಳನ್ನು ಕಲೆಹಾಕುವುದು ಮುಖ್ಯ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.ನಗರದ ಜಿಲ್ಲಾ ಪೋಲೀಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಲಯ ಪೋಲೀಸ್ ಕರ್ತವ್ಯ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೋಲೀಸರು ಇಂದಿನ ತಂತ್ರಜ್ಞಾನದ ಸಹಾಯದಿಂದ ಸರಿಯಾದ ರೂಪದಲ್ಲಿ ತನಿಖೆ ನಡೆಸಬೇಕು.ಅಪರಾಧಿಗೆ ಶಿಕ್ಷೆಗೊಳಪಡಿಸಲು ಸಾಕ್ಷಿ ಹಾಗೂ ಆಧಾರ ಮುಖ್ಯವಾಗುತ್ತದೆ ಅದಕ್ಕಾಗಿ ಈ ಬಗ್ಗೆ ಸೂಕ್ತ ತಯಾರಿಬೇಕು.ಬದಲಾಗಿರುವ ಕಾನೂನು ಬಗ್ಗೆ ಅರಿವು ಹೊಂದಬೇಕು.  ಪ್ರಕರಣದ ನಡೆದ ಸ್ಥಳದ ಚಿತ್ರೀಕರಣ ಮಾಡಲು ಮೊಬೈಲ್ ಬಳಕೆ ಮಾಡಬಹುದು.ಈ ಬಗ್ಗೆ ಬಹಳಷ್ಟು ಗೊಂದಲಗಳಿವೆ ಆದರೆ ಮೊಬೈಲ್ ಬಳಕೆ ಮಾಡಬಹುದು ಎಂಬುದು ಕಾನೂನಿನಲ್ಲಿದೆ ಅದರೊಂದಿಗೆ ಪ್ರಕರಣದ ಬಗ್ಗೆ ಆಡಿಯೋ ವಿಡಿಯೋ ಅಗತ್ಯವಿದೆ.ಅದಕ್ಕಾಗಿ ಅಧಿಕಾರಿಗಳು ಸೂಕ್ತ ಎವಿಡೆನ್ಸ್ ಕಲೆ ಹಾಕುವುದು ಮುಖ್ಯ.ಇದರಿಂದ ನ್ಯಾಯಾಧೀಶರಿಗೂ ಉತ್ತಮ ತೀರ್ಪು ಕೊಡಲು ಸಾಧ್ಯ ಎಂದರು.ಪೋಲೀಸ್ ಅಧಿಕಾರಿಗಳು ನಾವು ಮಾಡುವ ದಿನನಿತ್ಯದ ಕೆಲಸದಲ್ಲಿ ಬದಲಾವಣೆ ತರಬೇಕಾದ ಅಗತ್ಯತೆ ಇದೆ. ವೈಜ್ಞಾನಿಕವಾಗಿಯೂ ತನಿಖೆ ನಡೆಸುವ ಅಗತ್ಯವಿದೆ ಅದಕ್ಕಾಗಿ ತಯಾರಿ ಬೇಕು.ಪ್ರಕರಣದ ಬಗ್ಗೆ ತನಿಖೆ ನಡೆಸುವಾಗ ದೊಡ್ಡ ದೊಡ್ಡ ಕಾಗದದ ಫೈಲ್ ನಮ್ಮ ಮುಂದೆ ತಂದಿಡುವುದಷ್ಟೇ ಅಲ್ಲ ತಂತ್ರಜ್ಞಾನ ಬದಲಾಗಿದೆ ಅದನ್ನು ಅಳವಡಿಸಿಕೊಂಡು ಸಾಧ್ಯವಾದಷ್ಟು ಸರಳೀಕರಿಸಿ ನೀಡುವುದು ಜೊತೆಗೆ ಮೊಬೈಲ್ ಗಳ ಬಳಕೆ ಮಾಡಿ ತನಿಖೆಗೆ ಅಗತ್ಯ ಕಾರ್ಯೋನ್ಮುಖರಾಗಬೇಕು.ಅಪರಾಧಿಗಳು ಕೂಡ ನೂತನ ತಂತ್ರಜ್ಞಾನ ಬಳಕೆ ಮಾಡುತ್ತಾರೆ ಆದ್ದರಿಂದ ಪೋಲೀಸರು ಕೂಡ ತನಿಖೆ‌ನಡೆಸುವ ವೈಖರಿ ಬದಲಾಯಿಸಬೇಕು.ತನಿಖೆ ಸರಿಯಾದ ರೀತಿ ನಡೆಯಬೇಕು.ಕಲಿಯಬೇಕೆಂಬ ಮನೋಭಾವ ಇದ್ದರೆ ಮಾತ್ರ ಹೊಸತನದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಾಧ್ಯ.ಪ್ರತಿನಿತ್ಯ ಹೊಸತನ ಅಳವಡಿಸಿಕೊಳ್ಳಬೇಕು.ಎಲ್ಲರಿಂದ ಎಲ್ಲವನ್ನೂ ಕಲಿತು ಅಪ್ ಡೇಟ್ ಹಾಕಬೇಕು. ನೊಂದವರಿಗೆ ನ್ಯಾಯ ಒದಗಿಸಬೇಕು .ಮುಂದಿನ ದಿನಗಳಲ್ಲಿ ಪೋಲೀಸರು ಅಪ್ ಡೇಟ್ ಆಗಿ ಅಪರಾಧಿಗಳಿಗೆ  ಶಿಕ್ಷೆ ನೀಡಿ ನೊಂದವರಿಗೆ ನ್ಯಾಯ ಒದಗಿಸಬೇಕು ಎಂದರು.ಈ ವೇಳೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ, ಎಎಸ್ಪಿ ವಿಜಯಕುಮಾರ್ ಎಂ ಸಂತೋಷ್,ಜಿ.ಮಂಜುನಾಥ್,ಡಾ.ಛಾಯಾಕುಮಾರಿ ಉಪಸ್ಥಿತರಿದ್ದರು.