ಅದ್ದೂರಿಯಾಗಿ ಜರುಗಿದ ಶ್ರೀ ಲಿಂಗೇಶ್ವರ ಸ್ವಾಮಿಯ ರಥೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೩; ನಗರದ ಪುಷ್ಪಂಜಲಿ ಚಿತ್ರಮಂದಿರ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ರಥೋತ್ಸವ ಇಂದು ಅದ್ದೂರಿಯಾಗಿ ಜರುಗಿತು. ರಥೋತ್ಸವ ಪ್ರಯುಕ್ತ ಸ್ವಾಮಿಗೆ ಬೆಳಿಗ್ಗೆಯೇ ರುದ್ರಾಭಿಷೇಕ ಸೇರಿದಂತೆ‌ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಹೆಬ್ಬಾಳು ಮಹಾಂತರುದ್ರಮುನಿ ಸ್ವಾಮೀಜಿಗಳು ಲಿಂಗ ಪೂಜೆಯನ್ನು ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ದೇವಸ್ಥಾನ ಕಮಿಟಿ ಅಧ್ಯಕ್ಷ ಅಜ್ಜಂಪುರ ಶೆಟ್ರು‌ ಮಂಜಣ್ಣ, ಕೆಜಿ ಮಂಜುನಾಥ್, ಕಿರುವಾಡಿ ಸೋಮಶೇಖರ್, ಸುರೇಂದ್ರಪ್ಪ, ಕರೆಶಿವಪ್ಳ ಸಿದ್ದೇಶ್, ಪೈಲ್ವಾನ್ ನಾಗಪ್ಪನವರ್, ಕಿರುವಾಡಿ ಚಂದ್ರಶೇಖರ್, ವಾಸು ಸೋಮಶೇಖರ್ ಸೇರಿದಂತೆ ಸಾವಿರಾರು ಭಕ್ತರು‌ ಪಾಲ್ಗೊಂಡಿದ್ದರು.