ಪ್ರತಿಭಾ ಪುರಸ್ಕಾರ
ಹುಬ್ಬಳ್ಳಿ,ಸೆ.3: ಬಿಲ್ಲವ ಸಮಾಜ ಸೇವಾ ಸಂಘ ವತಿಯಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ವಿದ್ಯಾನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಸಾಧನೆಗೈದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಿಲ್ಲವ ಸಿರಿ ಪ್ರಶಸ್ತಿಯನ್ನು ವಿಜಯ ಪೂಜಾರಿ ಮತ್ತು ಸಮಾಜದ ಸಾಧಕರಾದ ಸಂಜೀವ್ ಪೂಜಾರಿ ಹಾಗೂ ಸಂತೋಷ್ ಈಳಿಗೇರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಟ್ರಸ್ಟ್‍ನ ಆನಂದ ಗುರುಸ್ವಾಮಿ, ಉತ್ತರ ಪ್ರಾಂತ ಕರ್ನಾಟಕ ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ವಿನಾಯಕ ತಳಗೇರಿ, ಆನಂದ ಪೂಜಾರಿ, ವಿವೇಕ ಪೂಜಾರಿ, ಶ್ಯಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.