ಹಿತ ಮಿತ ಆಹಾರ ವಿಹಾರದಿಂದ ಆರೋಗ್ಯವಂತ ಜೀವನ
ಧಾರವಾಡ, ಸೆ. 3: ಇಂದಿನ ಜೀವನ ಶೈಲಿಯಲ್ಲಿ ಶರೀರ ಸದೃಢವಾಗಿ ಹಾಗೂ ಮನಸ್ಸು ಶಾಂತವಾಗಿ, ನಿರ್ಮಲವಾಗಿರಲುಯೋಗ ವಿದ್ಯೆಯಿಂದ ಮಾತ್ರ ಸಾಧ್ಯ. ಇಂತಹದೈಹಿಕ ಹಾಗೂ ಮಾನಸಿಕ ಸದೃಢತೆ ಸಾಧನೆಗೆ ಪೂರಕವಾಗಿದೆಎಂದುಧಾರವಾಡ ಪರಮಹಂಸಯೋಗ ಪೀಠದಡಾ.ಶೋಭಾ ಹೂಲಿಕಟ್ಟಿಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದಡಾ.ದಿನೇಶ ಮ.ಪರಡ್ಡಿ ಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ ಜೀವನಧರ್ಮ' ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಇಂದಿನ ಆಧುನಿಕಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ಹಾಗೂ ಇತರ ಪದಾರ್ಥಗಳೆಲ್ಲ ವಿಷಯುಕ್ತ ಹಾಗೂ ಕಲಬೆರಕೆಯಿಂದಕೂಡಿವೆ.
ಇದರಿಂದ ದಿನಕ್ಕೊಂದು ಹೊಸ ರೋಗಗಳಿಗೆ ತುತ್ತಾಗುತ್ತಿರುವುದು ವಿಷಾದಕರ. ಹಿತ-ಮಿತಆಹಾರ, ವಿಹಾರದಿಂದ ಮನುಷ್ಯಆರೋಗ್ಯವಂತನಾಗಿಜೀವನ ಸಾಗಿಸಬಹುದು.
ಆಹಾರವುಒಂದುಔಷಧಿಎಂಬುದನ್ನುಅರ್ಥ ಮಾಡಿಕೊಳ್ಳಬಹುದು.ವಯೋಮಾನಕ್ಕೆತಕ್ಕಂತೆಆಹಾರ ಸೇವನೆ, ಯೋಗದಿಂದ ಮನುಷ್ಯ ನಿರೋಗಿಯಾಗಿ ಬಾಳಬಹುದು. ದೇಹ ಹಾಗೂ ಮನುಸ್ಸುಗಳ ನಡುವೆ ಸಮತೋಲನವನ್ನುಂಟು ಮಾಡಲು ಹಾಗೂ ಜೀವನ ಸಾರ್ಥಕಗೊಳಿಸಲು ಸತ್ಸಂಗ, ಸತ್ಕಾರ್ಯ, ಧ್ಯಾನ, ಸ್ನೇಹಿತರಜೊತೆ ಸೌಹಾರ್ಧಯುತವಾದ ಸಂಬಂಧ ಒಳ್ಳೆಯ ವಿಚಾರಗಳ ವಿನಿಮಯದತೃಪ್ತಿಕರಜೀವನದಿಂದಜೀವನ್ಮುಕ್ತಿ ಹೊಂದಲು ಸಾಧ್ಯ. ಇದುವೇ ನಿಜವಾದಜೀವನಧರ್ಮ.ಲೌಕಿಕ ವಿಧಾನದಲ್ಲಿ ಬದುಕುವುದೇಜೀವನಧರ್ಮದ ತಿರುಳು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಾನಸಿಕ ನೆಮ್ಮದಿಗಾಗಿಇಂತಹಯುಕ್ತವಾದಜೀವನ, ಧರ್ಮಪಾಲನೆ ಮಾಡಿದರೆಜೀವನಕ್ಕೊಂದು ಬೆಲೆ ಬರುವುದು.ಮುಖ್ಯವಾಗಿಯುವಕರುಇದನ್ನು ಅರ್ಥೈಯಿಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಅನಿಲ ಪರಡ್ಡಿಇದ್ದರು.