ರಾಜಶೇಖರ ನೀರಮಾನ್ವಿ ಅವರ ಕಥೆಗಳು ಶಾಶ್ವತ : ರವಿಕುಮಾರ್
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.03: ಕನ್ನಡ ಸಾಹಿತ್ಯ ಲೋಕದಲ್ಲಿ ರಾಜಶೇಖರ ನೀರಮಾನ್ವಿ ಅವರ ದಟ್ಟ ಅನುಭವಗಳು ಗಟ್ಟಿ ಕಥೆಗಳ ರೂಪದಲ್ಲಿ ಶಾಶ್ವತ ಸ್ಥಾನ ಪಡೆದಿವೆ. `ಭೂಮಿಯಲ್ಲಿ ಇಡಿಯಷ್ಟು ಬೀಜ ಹಾಕಿ ರಾಶಿಯಷ್ಟು ಪ್ರತಿಫಲ’ ಪಡೆದಿದ್ದು ಬಹಳ ಕಡಿಮೆ ಎಂದು ಸಂಶೋಧನಾ ವಿದ್ಯಾರ್ಥಿ ರವಿಕುಮಾರ್ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಡಾ. ರಾಜಶೇಖರ ನೀರಮಾನ್ವಿ ಅವರ ಸ್ಮರಣಾರ್ಥ ಸಂವಾದ ಕಾರ್ಯಕ್ರಮವನ್ನು ಪಂಪ ಸಭಾಂಗಣದಲ್ಲಿ 31ನೇ ಆಗಸ್ಟ್ 2024ರಂದು ಆಯೋಜಿಸಲಾಗಿತ್ತು.
ಮುಂದುವರೆದು ಮಾತನಾಡುತ್ತ, ಹಂಗಿನರಮನೆಯ ಹೊರಗೆ ಮತ್ತು ಕರ್ಪೂರದ ಕಾಯದಲ್ಲಿ ಎಂಬ ಕಥಾ ಸಂಕಲನಗಳು ವಿಶೇಷವಾಗಿವೆ. ರಾಜಶೇಖರ ನೀರಮಾನ್ವಿ ಅವರ ಮೊದಲ ಕಥೆಗಳು ವೃತ್ತ, ಭೂತ ಮತ್ತು ಹಂಗಿನರಮನೆಯ ಹೊರಗೆ ಪತ್ರಿಕೆಗಳ ಮೂಲಕ ಮೆಚ್ಚುಗೆ ಪಡೆದಿವೆ. ಗಂಡು ಮತ್ತು ಹೆಣ್ಣು ಮಾತ್ರ ಜಾತಿಗಳು ಇದರ ಹೊರತು ಯಾವ ಜಾತಿಯಿಲ್ಲ ಎಂದರು.
ಸಂಶೋಧನಾ ವಿದ್ಯಾರ್ಥಿ ಮಂಜುನಾಥ್ ಕೆ. ಅವರು ಮಾತನಾಡುತ್ತ ರಾಜಶೇಖರ ನೀರಮಾನ್ವಿ ಅವರ ಕೃತಿಗಳು ದೇಶದ ಎಲ್ಲಾ ಭಾಷೆಗಳಲ್ಲಿ ಅನುವಾದವಾಗಿರುವುದು ವಿಶೇಷ. ಪುರೋಹಿತರನ್ನು ನಂಬಿ ನಾವು ಹೇಗೆ ಮೂರ್ಖರಾಗಿದ್ದೇವೆ ಎಂಬುದನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ಡಾ.ಗೋವಿಂದ ಮತ್ತು ಸಂಶೋಧಕರಾದ ಇಸ್ಮಾಯಿಲ್ ಸಿದ್ದಿಕ್, ಮಂಜುನಾಥ್ ಕೆ, ದೇವಿಂದ್ರಪ್ಪ, ರವಿಚಂದ್ರ ಕೆ, ಅಕ್ಷತ ಟಿ, ಶಬ್ರಿನ್ ಬಾನು, ಗುರುರಾಜ್ ಎನ್, ಖಾಜಾಸಾಬ್, ಪ್ರವೀಣ್ ಕೆ, ವಿಷ್ಣು ಉಪಸ್ಥಿತರಿದ್ದರು.