ರಾತ್ರಿ ವೇಳೆ ಪೆÇಲೀಸ್ ಬೀಟ್ ವ್ಯವಸ್ಥೆ: ಶ್ರೀವತ್ಸ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.03:- ವಲಯ 3ರ ವ್ಯಾಪ್ತಿಯ ವಾರ್ಡ್ ನಂಬರ್ 47ರಲ್ಲಿ ಸುತ್ತಮುತ್ತ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕ ಟಿ.ಎಸ್.ಶ್ರೀವತ್ಸ ಆಲಿಸಿದರು.
ಸೋಮವಾರ ಮುಂಜಾನೆ ಕುವೆಂಪು ಶಾಲೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿ ಸರಸ್ವತಿಪುರಂನ 15, 14, 13, 12ನೇ ಕ್ರಾಸ್ ಭಾಗದ ಎಲ್ಲಾ ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಿದ ಅವರು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಈ ಭಾಗದ ಜನರ ಸಮಸ್ಯೆಗಳಾದ ರಸ್ತೆ ಭಾಗದಲ್ಲಿ ಕಸ ಸುರಿಯುವುದು, ಮಳೆ ಬಂದಂತಹ ಸಂದರ್ಭದಲ್ಲಿ ಮಳೆ ನೀರು ನಿಲ್ಲುತ್ತಿರುವುದು, ಪಾರ್ಕ್‍ಗಳಲ್ಲಿ ರಾತ್ರಿ ವೇಳೆ ಕೆಲವು ಪುಂಡ ಯುವಕರು ಮದÀ್ಯಪಾನ ಮಾಡಿ ಬಾಟಲಿ ತಂದು ಹಾಕುತ್ತಾರೆ. ಬೆಳ್ಳಗಿನ ಸಮಯ ವಾಯು ವಿಹಾರಿಗಳು ಹಿರಿಯ ನಾಗರಿಕರು ಪಾರ್ಕಿನಲ್ಲಿ ವಾಕಿಂಗ್ ಮಾಡುವುದರಿಂದ ಶೌಚಾಲಯ ವ್ಯವಸ್ಥೆ ಮಾಡಿಕೊಡಿ. ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲಿದ್ದ ಪೆÇಲೀಸ್ ಅಧಿಕಾರಿ ನಾಗರಾಜು ಅವರಿಗೆ ಪಾರ್ಕಿನ ಸುತ್ತಮುತ್ತ ಮತ್ತು ಈ ಭಾಗಗಳಲ್ಲಿ ದಿನನಿತ್ಯ ಬೀಟ್ ಪೆÇಲೀಸ್ ವ್ಯವಸ್ಥೆ ಮಾಡಬೇಕು. ಹಾಗೆಯೇ ಆರೋಗ್ಯ ಅಧಿಕಾರಿ ಪ್ರಭಾಕರ್ ಅವರಿಗೆ ಈ ಸುತ್ತಮುತ್ತ ಎಲ್ಲೂ ಕಸವನ್ನು ಹಾಕುವ ಮತ್ತು ಗುಡಿಸುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಭಾಗದಲ್ಲಿ ಎಲ್ಲೂ ಕೂಡ ಮಳೆ ನೀರು ನಿಂತು ಸಾರ್ವಜನಿಕರಿಗೆ ಅನಾನುಕೂಲ ಆಗಬಾರದು. ಈ ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಾಜಿ ಮೇಯರ್ ಶಿವಕುಮಾರ್, ಎಇಇ ಧನುಷ್, ಆರೋಗ್ಯ ಅಧಿಕಾರಿ ಪ್ರಭಾಕರ್, ಅಧಿಕಾರಿ ಬಸವಣ್ಣ, ವಾಟರ್ ಸಪ್ಲೈಯರ್ ಮಂಜುನಾಥ್, ಉಪೇಂದ್ರ, ಶ್ರೀನಿವಾಸ್, ರಮೇಶ್, ಲಕ್ಷ್ಮಣ್, ರಾಮದಾಸ್, ದೀಪಕ್, ಜೋಗಿ ಮಂಜು, ರಾಕೇಶ್ ಗೌಡ, ಜಯರಾಮ್, ಪಾರ್ಥ ಸಾರಥಿ, ನಿಶಾಂತ್, ಆಪ್ತ ಸಹಾಯಕ ಆದಿತ್ಯ ಇದ್ದರು.