ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ
ಸಂಜೆವಾಣಿ ವಾರ್ತೆ
ಹನೂರು ಸೆ 3 :- ತಾಲೂಕಿನ ಮಾರ್ಟಳ್ಳಿಯ ಸೆಂಟ್ ಮೇರಿಸ್ ಆಂಗ್ಲ ಪ್ರೌಢ ಶಾಲೆ ಹಾಗೂ ಸೆಂಟ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ ಮಾರ್ಟಳ್ಳಿ ಇಲ್ಲಿಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ವಿಭಾಗ : ಜೀನಾ ರೋಸ್ಲಿನ್ 800 ಮೀ ಓಟ ಪ್ರಥಮ , ಫೆಲ್ಸಿ ಎತ್ತರ ಜಿಗಿತ ಪ್ರಥಮ ಬಾಲಕರ 4100 ರಿಲೇ ಪ್ರಥಮ, ಆಕಾಶ್ 400 ಮೀ ಹಾಗೂ ಉದ್ದ ಜಿಗಿತ ದ್ವಿತೀಯ. ಪ್ರಾಥಮಿಕ ಶಾಲಾ ವಿಭಾಗ : ರೆಮಿ ಪ್ರೆಸಿಲ್ಲ 400 ಮೀ ಪ್ರಥಮ, ಬಾಲಕರ ವಾಲಿಬಾಲ್ ಪ್ರಥಮ, ಎಂಜಾಲಿನ್ ರೋಸಾರಿಯೋ 400 ಮೀ ದ್ವಿತೀಯ, ಜೋನೆಟ್ ಸೆಲ್ವಿ 600 ಮೀ ದ್ವಿತೀಯ, ಬಾಲಕೀಯರ ವಾಲಿಬಾಲ್ ದ್ವಿತೀಯ, ಬಾಲಕಿಯರ 4100 ರಿಲೇ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.
ಹಲವು ಪ್ರಶಸ್ತಿಗಳೊಂದಿಗೆ ಉತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಶಾಲಾ ವ್ಯವಸ್ಥಾಪಕರಾದ ವಂ. ಪಾ. ಟೆನಿಕುರಿಯನ್ ರವರು ಹಾಗೂ ಮುಖ್ಯ ಶಿಕ್ಷಕರುಗಳಾದ ಅನ್ನೈ ನಾದನ್ ಹಾಗೂ ಸಿಸ್ಟರ್ ಸಿಂಧೂ ಸೈಮಾನ್ ಹಾಗೂ ವಿಜೇತರನ್ನು ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಸ್ಯಾಮ್ಸನ್ ಮತ್ತು ತೋಮೈಯನ್ ಹಾಗೂ ಸಹ ಶಿಕ್ಷಕ ವೃಂದದವರು ಹಾಗೂ ಸಿಬಂಧಿ ವರ್ಗದವರು ತುಂಬು ಹೃದಯದಿಂದ ಅಭಿನಂದಿಸಿದರು.