ಸತ್ಸಂಗದಿAದ ಅಂಗ ಗುಣ ಅಳಿಯುವವು: ಡಾ. ಉಷಾದೇವಿ ಹಿರೇಮಠ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೩:ಸತ್ಸಂಗದಿAದ ಮಾನವನು ಮಹಾಮಾನವನಾಗಿ ಪರಿವರ್ತನೆಗೊಳ್ಳತ್ತಾನೆ. ಅಂಗ ಗುಣಗಳು ಅಳಿದು ಲಿಂಗ ಗುಣಗಳು ಅಳವಡಿಕೆಯಾಗುತ್ತವೆ. ಶಿವಶರಣರ ವಚನಗಳಲ್ಲಿ ಆತ್ಮ ಸಾಕ್ಷಾತ್ಕಾರ ಹೊಂದಲು ಬೇಕಾದ ತತ್ವಗಳಿವೆಯೆಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ. ಉಷಾದೇವಿ ಹಿರೇಮಠ ಹೇಳಿದರು.
ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಶ್ರಾವಣ ಮಾಸದ ಪ್ರವಚನದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಶರಣ ಚರಿತಾಮೃತ ವಿಷಯ ಕುರಿತು ಪ್ರವಚನ ಹೇಳಿದ ಮಾತೋಶ್ರೀ ಸುಖದೇವಿ ಅಲಬಾಳಮಠ ಅವರು, ಸಂತರ, ಶರಣರ ಆದರ್ಶಗಳನ್ನು ಅಂತರ್ಗತ ಮಾಡಿಕೊಂಡರೆ ಬದುಕು ಬೆಳಕಾಗುವುದೆಂದು ಹೇಳಿದರು.
ಸಾಯಿಬಾಬಾ ಮಂದಿರದ ಟ್ರಸ್ಟ್ ಸಮಿತಿಯ ಸದಸ್ಯ ಅರ್ಜುನ ಜಾಧವ ಹಾಗೂ ಜೀಜಾ ಮಾತಾ ಮಾತೃ ಮಂಡಳಿ ಅದ್ಯಕ್ಷÀ ಭುವನೇಶ್ವರಿ ಕೋರವಾರ ಅವರು ಮಾತನಾಡಿದರು.
ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಎಮ್.ಪಿ. ತಂಗಾ ವಂದಿಸಿದರು.
ಮಹಾನಗರಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗುವುದರಿಂದ ಮನಸ್ಸು ಪರಿಶುದ್ದವಾಗುತ್ತದೆ ಎಂದು ಹೇಳಿದರು.
ಅಶೋಕ ಕೋರವಾರ, ಕೆ.ಎಂ. ಕಾರಜೋಳ, ಜಗದೇವ ಸೂರ್ಯವಂಶಿ, ಕವಿತಾ ಹಿರೇಗೌಡರ, ಸುನಂದಾ ಕಂಚ್ಯಾಣಿ, ಸುರೇಶ ಕೋರವಾರ, ಶಾಂತಲತಾ ಜಾಧವ, ವಿಜಯಾ ಪಾಟೀಲ, ಅಶೋಕ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು.