ಕಟಬು ಕಟಬರ್ ಜನಜಾಗೃತಿ ಸಮಾವೇಶ ಸಮಾಜ ಒಗ್ಗೂಡಿದರೆ ಸಂಘಟನೆಯ ಬಲ
ಚಡಚಣ:ಸೆ.೩:ಕಟಬು ಕಟಬರ್ ಸಂಘಟನೆಯಿAದ ಸಮಾಜದ ಬಂಧುಗಳಲ್ಲಿ ಸಂಘಟನೆಯ ಬಲಬಂದತಾಗಿದೆ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಶಂಕರ್ ಪಾರ್ವತಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕಟಬು ಕಟಬರ, ಅಲೆಮಾರಿ ಒಕ್ಕೂಟದಿಂದ ಭಾನುವಾರ ನಡೆದ ಬೃಹತ್ ಜಿಲ್ಲಾ ಜಾಗೃತಿ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಕಲ್ಲಿನಾಥ ಮಹಾಸ್ವಾಮಿಗಳು, ಶ್ರೀ, ಷ, ಬ್ರ,ವೀರಮಹಾಂತ ಶಿವಾಚಾರ್ಯರು ಇವರ ಸಾನಿಧ್ಯದಲ್ಲಿ ಕಾರ್ಯಕ್ರಮದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾದ ಇಂಡಿ ತಾಲೂಕಿನ ಶಾಸಕರಾದ ಯಶವಂತರಾಯಗೌಡ್ ಪಾಟೀಲ ಸಮಾಜ ಸಂಘಟನೆಯಿAದ ದುರ್ಬಲರಿಗೆ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದಾಗ ಮಾತ್ರ ಸಂಘಟನೆಗೆ ಬೆಲೆ ಬರುತ್ತದೆ, ಬಸವ ತತ್ವ ಪಾಲನೆ ನಮ್ಮೆಲ್ಲರ ದ್ಯೇಯವಾಗಬೇಕು ಮತ್ತು ಕಟಬು ಕಟಬರ ತಾವು ಅಲಿಮಾರಿ ಜನಾಂಗವಾಗಿದ್ದು ಸರ್ಕಾರ ಗಮನಕ್ಕೆ ನಾನು ತರಬೇತಿಸುತ್ತೇನೆ ಸ್ವತಹ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತನಾಡಿ ನಿಮ್ಮನ್ನು ನ್ಯಾಯ ಒದಗಿಸಿ ಕೊಡುತ್ತೇನೆ ಎಂದು ಈ ಕಾರ್ಯಕ್ರಮದಲ್ಲಿ ಹೇಳಿದರು.
ಹನುಗುಂದ ಲೀಲಾಮಠದ ಶ್ರೀ ಕಲ್ಲಿನಾಥ ಸ್ವಾಮೀಜಿ , ಚೆಲುವಗೇರಿ ಶ್ರೀ ವೀರಮಂತ ಸ್ವಾಮೀಜಿ ಮಾತನಾಡಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ ಕಟಬು ಕಟಬರ ಜಾತಿಯ ಪರ್ಯಾಯ ಪದಗಳಾದ ಸಿಳ್ಳಿಕ್ಯಾತ, ಕಿಳ್ಳಿಕ್ಯಾತ, ಬುಂಡೆಬೆಸ್ತ ಕುಲಶಾಸ್ತ್ರೀಯ ಅಧ್ಯಯನ ಅತಿ ಶೀಘ್ರದಲ್ಲಿ ಅನುಷ್ಠಾನ ಆಗಬೇಕು ಎಂದರು.
ವಿಲಸ ಶಿಂಧೆ ಹಾಗೂ ಸಮಾಜದ ಮುಖಂಡರು ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು
ಜಿಲ್ಲಾ ಅಧ್ಯಕ್ಷರಾದ ಶಿವಮೂರ್ತಿ ಕಾಟಕರ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಮೇಶ ಕ್ಷತ್ರಿ ನಿರೂಪಣೆ ಮಾಡಿದರು, ಜಿಲ್ಲಾ ಉಪಾಧ್ಯಕ್ಷರಾದ ಮಹೇಶ ಶಿಂಧೆ ಸ್ವಾಗತಿಸಿದರು, ಸಿಂದಗಿ ಆಲಮೇಲ ತಾಲೂಕಿನ ಅಧ್ಯಕ್ಷರಾದ ಸಂತೋಷ ಕ್ಷತ್ರಿ ವದನಾರ್ಪಣೆ ಮಾಡಿದರು, ಮತ್ತು ಈ ಸಂದರ್ಭದಲ್ಲಿ ವರದಿಗಾರರಾದ ಪ್ರಕಾಶ್ ಕ್ಷತ್ರಿಯ ಹಾಗೂ ಲಕ್ಷ್ಮಣ ಶಿಂಧೆ, ಮತ್ತು ಚಡಚಣ ತಾಲೂಕ್ ಅಧ್ಯಕ್ಷರಾದ ದತ್ತು ಶಿಂದೆ, ವ್ಯಾಪಾರಸ್ಥರಾದ ಹನುಮಂತ ಕ್ಷತ್ರಿ, ದಯಾನಂದ ಶಿಂಧೆ, ರವಿ ಶಿಂಧೆ, ರಾಜ್ಯ ಮಹಿಳಾ ಪ್ರತಿನಿಧಿ ರಾಜೇಶ್ವರಿ ಕ್ಷತ್ರಿ, ಅರ್ಜುನ ಕ್ಷತ್ರಿ, ಎಲ್ಲ ಗಣ್ಯ ಮಹನೀಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು