ಉಡುಪಿ: ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ-ಯುವಕ ಮೃತ್ಯು
ಉಡುಪಿ-ಕಾರಾವಾರದಿಂದ ಮಂಗಳೂರು ಕಡೆಗೆ ಹೊಗುವ ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಯುವಕ ಮೃತಪಟ್ಟಿದ್ದಾನೆ.
ಆಗಸ್ಟ್ ೩೧ರಂದು ಸತೀಶ(೨೬) ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದವನು ರಾತ್ರಿ ೯:೩೦ ಗಂಟೆಯಾದರೂ ಮನೆಗೆ ಬಾರದೆ ಇದ್ದು ರಾತ್ರಿ ರೈಲ್ವೆ ಹಳಿ ಕ್ರಾಸ್ ಮಾಡುವಾಗ ಅಕಸ್ಮಿಕವಾಗಿ ಕಾರಾವಾರ ಮಂಗಳೂರು ಕಡೆಗೆ ಹೊಗುವ ಮಂಗಳ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.