ಹೂವಿನಹಿಪ್ಪರಗಿಯಲ್ಲಿ ಪರಮಾನಂದ ದೇವರ ಜಾತ್ರೋತ್ಸವ
ಬಸವನಬಾಗೇವಾಡಿ, ಸೆ.೩:ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಆರಾಧ್ಯ ದೈವ ಪರಮಾನಂದ ದೇವರ ಜಾತ್ರೋತ್ಸವ ಸೋಮವಾರ ವಿಜೃಂಭಣೆಯಿAದ ನಡೆಯಿತು.
ಬೆಳಿಗ್ಗೆ ೬ ಗಂಟೆಗೆ ರುದ್ರಾಭಿಷೇಕ, ಎಲೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪರಮಾನಂದ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಉತ್ಸವವು ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ಮೇಳದೊಂದಿಗೆ ಹೊರಗಿನ ಗುಡಿ ತಲುಪಿತು.
ಸಾವಿರಾರು ಭಕ್ತರು ಉರುಳು ಸೇವೆ ಮಾಡಿದರು. ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ೬ ಗಂಟೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಪಲ್ಲಕಿಯೂ ವಾಧ್ಯ ಮೇಳದೊಂದಿಗೆ ಗ್ರಾಮಕ್ಕೆ ಹಿಂದಿರುಗಿತು.
ಪಲ್ಲಕ್ಕಿ ಮಹೋತ್ಸವದಲ್ಲಿ ಶಿವಯೋಗೆಪ್ಪ ಶಿವಯೋಗಿ,ರಾಜು ಪೂಜಾರಿ, ಶಿವಪ್ಪ ಪೂಜಾರಿ, ತಿರ್ಥಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ರಮೇಶ ಗುಂಡಾನವರ ಸೋಮಪ್ಪ ಚೌದ್ರಿ, ಮಾನಪ್ಪ ಬಡಿಗೇರ, ಅಣ್ಣಪ್ಪ ಗೋಡಿಕಟ್ಟಿ, ಅಪ್ಪು ವಗ್ಗರ ಇತರರು ಭಾಗವಹಿಸಿದ್ದರು.