ಲಾಭಾಂಶದ ಆಸೆ ಬರೋಬ್ಬರಿ 16 ಲಕ್ಷ ಕಳೆದುಕೊಂಡ ಬೈಲಕೆರೆಯ ವ್ಯಕ್ತಿ!
ಉಡುಪಿ: ದಿನ ನಿತ್ಯ ಆನ್ಲೈನ್ ಮೋಸದ ಸುದ್ದಿಗಳು ಬರುತ್ತಿದ್ದರೂ ಜನ ಮಾತ್ರ ಮೋಸ ಹೋಗುವುದು ನಿಂತಿಲ್ಲ. ಲಾಭಾಂಶದ ಆಸೆಗೆ ಹದಿನಾರು ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾರೆ.
ದೂರುದಾರ ಎಸ್. ಅಬ್ದುಲ್ ರಹೀಮಾನ್ ಸಾಹೇಬ್ (೬೭) ಬೈಲಕೆರೆ ಉಡುಪಿ ಇವರು ಶೇರು ಮಾರುಕಟ್ಟೆಯ ಬಗ್ಗೆ ಙouಣube ಮತ್ತು ಆನ್‌ಲೈನ್ ನಲ್ಲಿ ಸರ್ಚ್ ಮಾಡುತ್ತೀರುವಾಗ ಒಚಿಡಿvಚಿಟ Sಣoಛಿಞ ಏ೬ ಎಂಬ Whಚಿಣsಂಠಿಠಿ ಗ್ರೂಪ್ ನ ಲಿಂಕ್ ಸಿಕ್ಕಿದ್ದು ಸದ್ರಿ ಗ್ರೂಪ್‌ನಲ್ಲಿ ಯಾರೋ ಅಪರಿಚಿತ ವ್ಯಕ್ತಿ ಶೇರು ಮಾರುಕಟ್ಟೆಯ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ, ವಿವಿಧ ಬ್ಯಾಂಕ್ ಖಾತೆಗಳಿಗೆ ದಿನಾಂಕ:24/07/2024 ರಿಂದ ದಿನಾಂಕ:26/08/2024 ರ ತನಕ ಹಂತ ಹಂತವಾಗಿ ಒಟ್ಟು 16,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿದ್ದಾರೆ. ತದನಂತರ ಹೂಡಿಕೆ ಮಾಡಿದ ಹಣವನ್ನಾಗಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 64/2024 ಕಲಂ: 66 (ಸಿ) ೬೬ (ಡಿ) ಐ.ಟಿ. ಆಕ್ಟ್. , ೩೧೮ ಃಓS ರಂತೆ ಪ್ರಕರಣ ದಾಖಲಿಸಲಾಗಿದೆ.