ವೈದ್ಯಕೀಯ ಸೀಟು ಸಿಗದೇ ನೊಂದ ಯುವತಿ ಆತ್ಮಹತ್ಯೆ
ಕಲಬುರಗಿ:ಸೆ.2: ವೈದ್ಯಕೀಯ ಸೀಟು ಸಿಗಲಿಲ್ಲ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಫಜಲಪುರ ತಾಲ್ಲೂಕಿನ ದುದ್ದಣಗಿ ಗ್ರಾಮದಲ್ಲಿ ಸಂಭವಿಸಿದೆ. ಮೃತಳನ್ನು ಶ್ವೇತಾ ಅಪ್ಪಾಸಾಬ್ ಗುಣಾರಿ (20) ಎಂದು ಗುರುತಿಸಲಾಗಿದೆ.
ವೈದ್ಯಕೀಯ ಸೀಟಿಗಾಗಿ ಶ್ವೇತಾ ಗುಣಾರಿ ನೀಟ್ ಪರೀಕ್ಷೆ ಬರೆದಿದ್ದಳು. ಆದಾಗ್ಯೂ, ಸೀಟು ಸಿಗದೇ ಇದ್ದುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆದಿದೆ.