ಒಕ್ಕಲಿಗ ಸಂಘದ ಸಾಧನೆಗೆ ದೊರೆತ ಚಿನ್ನದ ಪದಕ
ಪುತ್ತೂರು;  ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘವು ಸದಸ್ಯರ ಸಹಕಾರದೊಂದಿಗೆ ೨೨ ವರ್ಷಗಳ ಸುದೀರ್ಘ ನಡೆಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಮಾಜವು ನಮ್ಮನ್ನು ಗುರುತಿಸುವ ಕೆಲಸ ಆಗಿದೆ. ಇದರ ಜೊತೆಯಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಮ್ಮ ಸಂಘವನ್ನು ೬ನೇ ಸ್ಥಾನ ಗುರುತಿಸಿ ಪ್ರಥಮ ಬಾರಿಗೆ ಚಿನ್ನದ ಪದಕದೊಂದಿಗೆ ಪುರಸ್ಕರಿಸಲಾಗಿದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.
ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್‌ನಲ್ಲಿ ಸ್ವಂತ ಕಟ್ಟಡದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಅವರು ಸೋಮವಾರ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು.
೨೦೦೨ರ ಸೆ. ೨ಕ್ಕೆ ಕುರುಂಜಿ ವೆಂಕಟ್ರಮಣ ಗೌಡರ ಮಾರ್ಗದರ್ಶನದಲ್ಲಿ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಪ್ರಥಮ ಬಾರಿಗೆ ಮಹಾಲಿಂಗೇಶ್ವರ ದೇವಸ್ಥಾನದ ಕಟ್ಟಡದಲ್ಲಿ ನಮ್ಮ ಸಹಕಾರಿ ಸಂಘ ಆರಂಭಗೊಂಡಿತ್ತು. ಸುಮಾರು ೨೦ ಸಮಾನ ಮನಸ್ಕರ ತಂಡ ನಿರಂತರ ಹೋರಾಟ ಮಾಡಿಕೊಂಡು ಮೋಹನ್ ಗೌಡ ಇಡ್ಯಡ್ಕ ಅವರ ನೇತೃತ್ವದಲ್ಲಿ ದಿ.ಜಗನ್ನಾಥ ಬೊಮ್ಮೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಪ್ರಾರಂಭಗೊಂಡ ಸಮಯ ನಿಧಾನಗತಿಯಲ್ಲಿ ಹೋದ ಸಂಘ ೨೦೦೯ರ ತನಕ ಯಾವುದೇ ಶಾಖೆ ತೆರೆಯದೆ ೫ ವರ್ಷ ಯಾವುದೇ ಡಿವಿಡೆಂಡ್ ಕೊಡದೆ ೨೦೦೯ರಲ್ಲಿ ಕಡಬದಲ್ಲಿ ಪ್ರಥಮ ಶಾಖೆ ತೆರೆದ ಬಳಿಕ ಸಂಘದ ಬೆಳವಣಿಗೆಗೆ ವೇಗ ಸಿಕ್ಕಿತು. ಬಳಿಕ ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ ಹೀಗೆ ನಿರಂತರವಾಗಿ ೨೦೨೪ರ ತನಕ ೧೦ ಶಾಖೆಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದೆ ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ, ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ಸಂಘ ಈಗಾಗಲೇ ೧೦ ಶಾಖೆಗಳನ್ನು ತೆರೆದು ಗಣ್ಯತೆಯನ್ನು ಪಡೆದುಕೊಂಡಿದೆ. ಮುಂದೆ  ಹೊರ ತಾಲೂಕುಗಳಲ್ಲಿಯೂ ಶಾಖೆಗೆಳನ್ನು ತೆರೆಯುವ ಗುರಿ ನಮ್ಮ ಮುಂದಿದೆ ಎಂದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಿನ್ನಪ್ಪ ಗೌಡ ಮಳವೇಲು, ರಾಮಕೃಷ್ಣ ಗೌಡ ಕರ್ಮಲ, ನಾರಾಯಣ ಗೌಡ ಪಾದೆ, ಸಂಘದ ಲೆಕ್ಕಪರಿಶೋದನಾಧಿಕಾರಿ ಶ್ರೀಧರ್ ಗೌಡ ಕಣಜಾಲು, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ತೆಂಕಿಲ, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಮುದಾಯ ಭವನದ ಉಸ್ತುವಾರಿ ದಯಾನಂದ ಕೆ.ಎಸ್, ಒಕ್ಕಲಿಗ ಮಹಿಳಾ ಗೌಡ ಸಂಘದ ನಿಕಟಪೂರ್ವ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಸಲಹಾ ಸಮಿತಿ ಸದಸ್ಯೆ ಗೌರಿ ಬನ್ನೂರು, ಬಾಬು ಗೌಡ ಭಂಡಾರದ ಮನೆ, ಸುರೇಶ್ ಗೌಡ, ಸೋಮಪ್ಪ ಗೌಡ ಬಡಾವು, ಸೀತಾರಾಮ ಪೆರಿಯತ್ತೋಡಿ, ಪ್ರೇಮಾನಂದ ಬಿ ಉಪಸ್ಥಿತರಿದ್ದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಸ್ವಾಗತಿಸಿ, ಪುತ್ತೂರು ಎಪಿಎಂಸಿ ಶಾಖಾ ಪ್ರಬಂಧಕಿ ತೇಜಸ್ವಿನಿ ವಂದಿಸಿದರು. ಪ್ರಭಾರ ಶಾಖಾ ಪ್ರಬಂಧಕಿ ನಿಶ್ಚಿತಾ ಯು.ಡಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಕಾವ್ಯ ಎ.ಎಸ್, ರಕ್ಷಿತ್ ಜಿ.ಎನ್, ಯಶ್ಚಿತ್, ಪಿಗ್ಮಿ ಸಂಗ್ರಹಕರಾದ ಮೋಹನ್ ಗೌಡ, ಕುಸುಮಾಧರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.