ಶಾಸಕ ರೈ ಹುಟ್ಟುಹಬ್ಬ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು- ವಿವಿಧ ಸವಲತ್ತು ವಿತರಣೆ-
ಪುತ್ತೂರು; ಪುತ್ತೂರು ಶಾಸಕ ಅಶೋಕ್ ರೈ ಅವರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸೋಮವಾರ ವಿವಿಧ ಜನಪರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ಕೋಡಿಂಬಾಡಿ ಮಹಿಷಮರ್ದಿನಿ ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಪುತ್ತೂರು ಮನೀಷಾ ಸಭಾಂಗಣದಲ್ಲಿ ಎ.ಆರ್.ವಾರಿಯರ್ಸ್ ವತಿಯಿಂದ ಅಸೋಕ್ ರೈ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು.
ಕಲ್ಲೇಗ ಟೈಗರ್ಸ್ ತಂಡದ ವತಿಯಿಂದ ಶಾಸಕ ರೈ ಅವರನ್ನು ಸನ್ಮಾನಿಸಲಾಯಿತು. ಪುತ್ತೂರು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ನಡೆಯಿತು. ಇದರಲ್ಲಿ ಶಾಸಕ ಅಶೋಕ್ ರೈ ಹಾಗೂ ಪತ್ನಿ ಸುಮಾ ಅಶೋಕ್ ರೈ ಅವರು ಭಾಗಿಯಾಗಿದ್ದರು.
ಶಾಸಕರ ಕಚೇರಿಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ ನೀಡಲಾಯಿತು. ಶಾಸಕರ ಹುಟ್ಟುಹಬ್ಬವನ್ನೂ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಂಎಸ್ ಮಹಮ್ಮದ್, ಡಾ.ರಾಜಾರಾಮ್ ಬಿ.ಕೆ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ ಮಟಂತಬೆಟ್ಟು ಮತ್ತಿತರರು ಭಾಗಿಯಾಗಿದ್ದರು.
ಇಂದಿರಾ ಕ್ಯಾಂಟೀನ್ ಉಚಿತ ಊಟ
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಪುತ್ತೂರಿನ ಇಂದಿರಾ ಕ್ಯಾಂಟೀನಿನಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಸಕರ ಕಚೇರಿ ಸಿಬಂದಿಗಳು ಹಾಗೂ ರೈ ಟ್ರಸ್ಟ್ ಸಿಬಂದಿಗಳು ಈ ವ್ಯವಸ್ಥೆಯನ್ನು ಮಾಡಿದ್ದರು.