ಶರಣ ಸಂಸ್ಥಾನದಿಂದ ಯೋಗ ಮತ್ತು ಮಾನವೀಯತೆಗೆ ಆದ್ಯತೆ
ಕಲಬುರಗಿ:ಸೆ.2:ಶರಣಬಸವೇಶ್ವರ ಸಂಸ್ಥಾನವು ನಿರಂತರವಾಗಿ ಯೋಗಕ್ಕೆ ಆದ್ಯತೆ ನೀಡುತ್ತಾ ಬಂದಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶರಣಬಸವಪ್ಪ ಪಾಟೀಲ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ʼಯೋಗದಿಂದ ಆರೋಗ್ಯʼ ಎಂಬ ವಿಷಯ ಕುರಿತು ಮಾತನಾಡಿದರು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಅನ್ನದಾಸೋಹ, ಶಿಕ್ಷಣ ದಾಸೋಹಕ್ಕೆ ಎಷ್ಟು ಪ್ರಾಮುಖ್ಯತೆ ನೀಡಿದ್ದಾರೆಯೋ ಅμÉ್ಟೀ ಪ್ರಾಮುಖ್ಯತೆ ಯೋಗಕ್ಕೆ ನೀಡಿದ್ದಾರೆ. ಸಂಸ್ಥಾನದಲ್ಲಿ ಅನೇಕ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಈ ಭಾಗದ ಜನರಿಗೆ ಆರೋಗ್ಯದ ಅರಿವು ಮೂಡಿಸಿದ್ದಾರೆ. ಅವರು ಸ್ವತಃ ನಿರಂತರವಾಗಿ ಯೋಗಭ್ಯಾಸ ಮಾಡುವುದರಿಂದ ಈ ಇಳಿವಯಸ್ಸಿನಲ್ಲೂ ಉತ್ಸಾಹದಿಂದ ಇರುತ್ತಾರೆ. ತಮ್ಮ ಹತ್ತಿರ ಬಂದ ಪ್ರತಿಯೊಬ್ಬರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಲಹೆ ನೀಡುತ್ತಾರೆ. ಯಾರು ಯೋಗವನ್ನು ನಿರಂತರವಾಗಿ ಮಾಡುತ್ತಾರೆ ಅವರ ಆರೋಗ್ಯ ಎಂದು ಕೆಡುವುದಿಲ್ಲ. ಯಾವುದೇ ಪ್ರಾಣಹಾನಿ ರೋಗಗಳು ಸುಳಿಯುವುದಿಲ್ಲ. ಯೋಗದಿಂದ ಮನಸ್ಸು, ಆರೋಗ್ಯ, ದೇಹ ಚೆನ್ನಾಗಿರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 2015 ರಲ್ಲಿ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿ ವಿಶ್ವಯೋಗದಿನಾಚರಣೆಯನ್ನು ಆಚರಣೆಗೆ ತಂದರು. ಪೂಜ್ಯ ಡಾ.ಅಪ್ಪ ಅವರಂತೆ ಪೂಜ್ಯ ಡಾ.ಅವ್ವ ಅವರು ಸಹ ಯೋಗದ ಕುರಿತು ಅನೇಕ ಕಾರ್ಯಕ್ರಮಗಳನ್ನು ಸಂಸ್ಥಾನದಲ್ಲಿ ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.
ನಂತರ ಶರಣಬಸವೇಶ್ವರ ಸಂಸ್ಥಾನ ಮತ್ತು ಮಾನವೀಯತೆ ಎಂಬ ವಿಷಯದ ಮೇಲೆ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ದೊಡ್ಡ ಸಂಸ್ಥಾನವಾಗಿದೆ. ಪೂಜ್ಯ ಡಾ.ದೊಡ್ಡಪ್ಪ ಅಪ್ಪ ಅವರು ಆರಂಭಿಸಿ ನಂತರ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ಅದನ್ನು ಮುಗಿಲ್ಲೆತ್ತರಕ್ಕೆ ಕೊಂಡೊಯದರು. ಅನೇಕ ಶಾಲಾ ಕಾಲೇಜುಗಳನ್ನು ಈ ಸಂಸ್ಥಾನದಿಂದ ನಡೆಸಿಕೊಂಡು ಈ ಭಾಗಕ್ಕೆ ಮಹತ್ವದ ಶೈಕ್ಷಣಿಕ ಕಾಣಿಕೆ ನೀಡುತ್ತಿದೆ. ಸಂಸ್ಥಾನ ಮಾನವೀಯತೆಗೆ ಬಹಳ ಹೆಸರು ಮಾಡಿರುವುದು. ಪೂಜ್ಯ ಅಪ್ಪ ಅವರು, ಪೂಜ್ಯ ಅವ್ವ ಅವರು ಮತ್ತು ಕಾರ್ಯದರ್ಶಿ ಬಸವರಾಜ ದೇಶಮುಖ ಅಣ್ಣ ಅವರು ಮಾನವಿಯತೆಯ ಸಹಕಾರ ಮೂರ್ತಿಯಾಗಿದ್ದಾರೆ ಎಂದು ಹೇಳಿದರು.