ಜೀವನ ಕೌಶಲ್ಯತೆಗಳ  ತರಬೇತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೩: ನಗರದ    ಜಿಎಂ  ಫಾರ್ಮಸಿ  ಕಾಲೇಜಿನಲ್ಲಿ  ಪ್ರಥಮ  ವರ್ಷದ  ವಿದ್ಯಾರ್ಥಿಗಳಿಗೆ  ಮೂರು ದಿನಗಳ ಜೀವನ ಕೌಶಲ್ಯತೆಗಳ  ಕಾರ್ಯಗಾರದ  ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಕಾರ್ಯಗಾರವನ್ನು ಪುಣೆ ಮೂಲದ ಪ್ರತಿಷ್ಠಿತ ಗ್ಲೋಬಲ್ ಟ್ಯಾಲೆಂಟ್ ಟ್ರ್ಯಾಕ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.ನುರಿತ ತರಬೇತಿ ತಜ್ಞರುಗಳಾದ  ದಾಮೋದರನ್  ಮೂರು  ದಿನಗಳ  ಈ ತರಬೇತಿ  ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಜಿ ಎಂ ಐ ಪಿ ಎಸ್ ಆರ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ತಿಳಿಸಿದರು. ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮುಖಾಂತರ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮ ಬೇಕೆಂದು ಇದೇ ವೇಳೆ ತಿಳಿಸಿದರು.ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ.ಆರ್ ಮಾತನಾಡಿ ತಮ್ಮ ಭವಿಷ್ಯದ ವೃತ್ತಿಜೀವನದ ಸವಾಲುಗಳಿಗೆ ತಯಾರಾದ ಸುಸಜ್ಜಿತ ವೃತ್ತಿಪರರನ್ನು ಪೋಷಿಸುವಲ್ಲಿ ಕಾರ್ಯಕ್ರಮವು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ  ತೇಜಸ್ವಿ ಕಟ್ಟಿಮನಿ ಟಿ. ಆರ್, ತರಬೇತುದಾರರದ  ದಾಮೋದರನ್,   ಡಾ. ಅಮಿತ್ ಕುಮಾರ್, ಪ್ಲೇಸ್ಮೆಂಟ್  ಸಂಯೋಜಕರಾದ  ಪ್ರೊ. ರಾಕೇಶ್ ಮತ್ತು ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.