ಕೇಂದ್ರ ಬಸ್‍ನಿಲ್ದಾಣ ಬಳಿ ಒತ್ತುವರಿ ತೆರವು
ಕಲಬುರಗಿ,ಸೆ 2: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ವಾರ್ಡ್ ನಂ 44 ರ ಶಾಂತಿನಗರದಲ್ಲಿ (ಕಮಲ್‍ಹೋಟೆಲ್ ಹಿಂದಿನ ರಸ್ತೆಯಲ್ಲಿ )ಒತ್ತುವರಿ ಮಾಡಿದ ಸ್ಥಳವನ್ನು ಇಂದು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾನೂನುಬಾಹಿರ ಒತ್ತುವರಿ ಮತ್ತು ಕಟ್ಟಡಕ್ಕೆ
ಮುಕ್ತಿ ನೀಡಿ ಸುಗಮ ವಾಹನ ಸಂಚಾರ ಮತ್ತು ಸ್ವಚ್ಛತೆಗೆ ಮೊದಲನೇ ಆದ್ಯತೆ ನೀಡಲಾಗುವದು ಎಂದು ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ್ ಅವರು ಹೇಳಿದರು.
ಅಮವಾಸ್ಯೆ ದಿನವಾದ ಇಂದು ನಡೆದ ಡೆಮಾಲಿಷನ್ ಕಾರ್ಯಾಚರಣೆಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.