ಕಳವು ಪ್ರಕರಣ: ಓರ್ವ ಆರೋಪಿ ಬಂಧನ, 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ: ಎಸ್ಪಿ
ವಿಜಯಪುರ,ಸೆ.2:ನಗರದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ವಿಜಯಪುರ ಪೆÇಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದು, ಆರೋಪಿಯಿಂದ 26,82,500 ರೂ. ಮೌಲ್ಯದ ಚಿನ್ನಾಭರಣವನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಭೇದಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ತಂಡ ಅತ್ಯಂತ ಚಾಣಾಕ್ಷತನದಿಂದ ಈ ಪ್ರಕರಣಗಳನ್ನು ಭೇದಿಸಿದೆ ಎಂದರು.
ಈ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಅಶ್ಫಾಕ್ ಉರ್ಫ್ ಅಶೋಕ ಸೈಫನಸಾಬ ಶೇಖ ಉರ್ಫ್ ಜಾತಗಾರ ಎಂದು ಗುರುತಿಸಲಾಗಿದೆ. ಆರೋಪಿಯು ಜಲನಗರ, ಎಪಿಎಂಸಿ ಯಾರ್ಡ್ ಪೆÇಲೀಸ್ ಠಾಣೆ ಹಾಗೂ ಆದರ್ಶ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ವಿಷಯ ತನಿಖೆ ವೇಳೆ ತಿಳಿದು ಬಂದಿದ್ದು, ಪ್ರಕರಣದಲ್ಲಿ ಒಟ್ಟು 362.5 ಗ್ರಾ ಬಂಗಾರದ ಆಭರಣ, 300 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ 26,82,500 ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಕಳ್ಳತನ ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು, ಈ ತಂಡ ಮಾಹಾರಾಷ್ಟ್ರದ ಸಾಂಗಲಿ, ಪುಣೆ ಹಾಗೂ ನೆರೆಯ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ಕಡೆಗಳಲ್ಲಿಯ ಆರೋಪಿತರ ತಪಾಸಣೆಯಲ್ಲಿ ಇದ್ದಾಗ ಬಂಧಿತ ಆರೋಪಿ ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿ ತಿರುಗಾಡುವಾಗ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದರು.
ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ, ಎಎಸ್ಪಿಗಳಾದ ರಾಮನಗೌಡ ಹಟ್ಟಿ, ಎಸ್.ಕೆ. ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ, ಪೆÇಲೀಸ್ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಸೀತಾರಾಮ ಲಮಾಣಿ, ಪ್ರೇಮಾ ಕೂಚಬಾಳ, ಸಿಬ್ಬಂದಿಗಳಾದ ವೈ.ಪಿ. ಕಬಾಡೆ, ಎಸ್.ಎ. ಬನಪಟ್ಟಿ, ಮಹೇಶ ಸಾಲಕೇರಿ, ಜೆ ಎಸ್. ವನಂಜಕರ, ಆಸೀಫ್ ಲಷ್ಕರಿ, ಆನಂದಯ್ಯ ಪೂಜಾರಿ, ನಿಂಗಪ್ಪ ವಟಾರ, ಶಶಿಕಾಂತ ತೊರವಿ, ಕೆ.ಡಿ. ಕುಲಕರ್ಣಿ, ಗುರುಪಾದ ಕನ್ನೊಳ್ಳಿ, ಸಚಿನ್ ಜಾಧವ ಅವರ ತಂಡ ಈ ಪ್ರಕರಣವನ್ನು ಭೇದಿಸಿದೆ ಎಂದರು.