ಮಾತೃ ಭಾಷೆಯನ್ನು ಉಳಿಸಿ ಬೆಳೆಸಿ : ಡಾ. ಚೆನ್ನಪ್ಪ ಕಟ್ಟಿ ಕರೆ
ವಿಜಯಪುರ,ಸೆ.2:ಭಾಷಾ ಸಾಹಿತ್ಯವೆಂಬುದು ಮಾತೃಭಾಷೆಯಿಂದಲೇ ಬರುವುದು. ಆದ್ದರಿಂದ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷÀ ಡಾ. ಚನ್ನಪ್ಪ ಕಟ್ಟಿ ಹೇಳಿದರು.
ಜಿಲ್ಲೆಯ ಸಿಂದಗಿ ಪಟ್ಟಣದ ಪಿ.ಇ.ಎಸ್. ಸಂಸ್ಥೆ ಹಾಗೂ ಲಾಯನ್ಸ್ ಕ್ಲಬ್ ಸಿಂದಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದವನಾದ ನನಗೆ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾಗಿರುವುದು ನಿಮ್ಮೆಲ್ಲರಿಗೂ ಭಾಗ್ಯ. ಈ ಭಾಗದ ಕೃತಿಗಳನ್ನು ಭಾಷಾಂತರಿಸಲು ಕವಿಗಳನ್ನು ಬೆಳೆಸಲು ಸಾಹಿತಿಗಳನ್ನು ಪ್ರೋತ್ಸಾಹಿಸಲು ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಜನಪದ ಅಕಾಡೆಮಿಯ ನೂತನ ಸದಸ್ಯ ಡಾ. ಎಂ.ಎಂ. ಪಡಶೆಟ್ಟಿ ಅವರು, ಜನಪದ ಎಂದರೆ ಅದು ಜೀವಭಾಷೆ. ನಮ್ಮ ಬದುಕಿನ ಭಾಷೆ. ಆದ್ದರಿಂದ ನಾವೆಲ್ಲರೂ ಜನಪದರೇ. ಜನಪದವೇ ನಮ್ಮ ಬದುಕಿನ ಜೀವಾಳ. ಹಾಗಾಗಿ ಜನಪದ ಸಾಹಿತ್ಯ ಮತ್ತು ಸಂಸ್ಕøತಿಯನ್ನು ಬೆಳೆಸಲು ನನಗೆ ಅವಕಾಶ ಒದಗಿ ಬಂದಿದೆ ಎಂದರು.
ಜಿ.ಪಿ. ಪೋರವಾಲ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕÀ ಡಾ. ರವಿ ಗೋಲಾ ಅವರಿಗೆ ಪದವಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ಅಲ್ಲದೇ ನಿವೃತ್ತ ಉಪನ್ಯಾಸಕ ಪಿ.ಎಂ. ಮಡಿವಾಳರ ಅವರು ತಮ್ಮ 70ರ ಇಳಿವಯಸ್ಸಿನಲ್ಲಿ ಇಂಗ್ಲೀಷ್ ಪದವಿ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು.
ವಿಭಾಗೀಯ ಜೋನ್ ಚೇರ್‍ಮನ್À ಎಂ.ಜೆ.ಎಫ್ ಲಾಯಿನ್ ಕೆ.ಎಚ್. ಸೋಮಾಪೂರ ಅವರು ಸ್ಥಳೀಯ ಲಾಯನ್ಸ್ ಕ್ಲಬ್‍ನ ಹುಟ್ಟು ಹಾಗೂ ಶ್ರೇಯಸ್ಸಿನ ಕುರಿತು ಮಾತನಾಡಿದರು.
ಸಮಾರಂಭದ ಸಮ್ಮುಖವನ್ನು ಪಿ.ಇ.ಎಸ್. ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್‍ನ ಅಧ್ಯಕ್ಷÀ ಮಹಾದೇವ ಲೋಣಿ ವಹಿಸಿದ್ದರು.
ನಿವೃತ್ತ ಪ್ರಾಚಾರ್ಯ ಹಾಗೂ ಆಡಳಿತಾಧಿಕಾರಿ ಲಾಯಿನ್ ಆಯ್.ಬಿ. ಬಿರಾದಾರ ಸ್ವಾಗತಿಸಿದರು. ಉಪನ್ಯಾಸಕ ಅಮೀರ ಮೋಪಗಾರ ನಿರೂಪಿಸಿದರು. ಪ್ರಾಚಾರ್ಯ ಆರ್.ಬಿ. ಗೋಡಕರ ವಂದಿಸಿದರು. ಲಾಯಿನ್ ಎಸ್.ಎಸ್. ಪಾಟೀಲ, ಲಾಯಿನ್ ಎಸ್.ಬಿ. ಚಾಗಶೆಟ್ಟಿ, ಪೋ. ಎಸ್. ವಾಯ್. ಬೀಳಗಿ, ಪ್ರಿ. ಜಿ.ಎಸ್. ಕಡಣಿ ಉಪಸ್ಥಿತರಿದ್ದರು.