ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ದತ್ತಿನಿಧಿ ಕಾರ್ಯಕ್ರಮಗಳು ಮಹತ್ವದ್ದಾಗಿದೆ: ಜೆ.ಎಸ್.ಪೂಜಾರಿ
ವಿಜಯಪುರ,ಸೆ.2: ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿಗಳ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವುದು ಇಡೀ ರಾಜ್ಯಕ್ಕೆ ಹೆಮ್ಮೆ ತರುವ ವಿಷಯ ಅಲ್ಲದೆ ದತ್ತಿ ಗೋಷ್ಠಿಗಳ ಮೂಲಕ ಇಂದು ನೌಕರರ ಆತ್ಮಸ್ಥೈರ್ಯ ಹೆಚ್ಚಿಸುವ ಉಪನ್ಯಾಸಗಳನ್ನು ಏರ್ಪಡಿಸಿದ್ದು ಸಂತೋಷದ ವಿಷಯವಾಗಿದೆ ಎಂದು ಪ.ಪೂ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಪೆÇ್ರ. ಜೆ.ಎಸ್. ಪೂಜಾರಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪ ಜಿಲ್ಲಾ, ತಾಲೂಕಾ ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಕಂದಾಯ ಇಲಾಖೆ ನೌಕರರ ಸಂಘ ವಿಜಯಪುರ ದತ್ತಿ, ದತ್ತಿ ದಾನಿಗಳು: ಅಧ್ಯಕ್ಷರು ಕಂದಾಯ ಇಲಾಖೆ ನೌಕರರ ಸಂಘ ವಿಜಯಪುರ ಹಾಗೂ ಲಿಂ. ಬಸಪ್ಪ ಅಡಿವೆಪ್ಪ ಬಿಜ್ಜರಗಿ ದತ್ತಿ ದತ್ತಿದಾನಿಗಳು: ಅಧ್ಯಕ್ಷರು ಕಂದಾಯ ಇಲಾಖೆ ನೌಕರರ ಸಂಘ ವಿಜಯಪುರ ಇವರ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದತ್ತಿ ಉಪನ್ಯಾಸ ವಿಶೇಷವಾಗಿ ನೌಕರರ ಸೇವಾ ಭದ್ರತೆ ಹಾಗೂ ಪಾರದರ್ಶಕ ಆಡಳಿತದ ಕುರಿತು ಏರ್ಪಡಿಸಿದ್ದು ನೌಕರರ ಸೇವಾ ದಕ್ಷತೆ ಹೆಚ್ಛಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ ವಿಶ್ರಾಂತ ಪ್ರಾಚಾರ್ಯ ಪೆÇ್ರ. ಬಿ.ಎಂ.ಆಜೂರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ರವಿವಾರವೂ ಸಹ ತಪ್ಪದೇ ಅತ್ಯಂತ ಮೌಲ್ಯಯುತವಾದ ವಿಷಯಗಳನ್ನು ದತ್ತಿ ಗೋಷ್ಠಿಗಳ ಮೂಲಕ ಮನದಟ್ಟು ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
ನೌಕರರ ಸೇವಾ ಭದ್ರತೆಯ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳಾದ ಎಸ್.ಎಲ್ ಇಂಗಳೇಶ್ವರ ಮಾತನಾಡಿ, ನೌಕರರಿಗೆ ಸೇವೆಯಲ್ಲಿ ಭದ್ರತೆ ಇದ್ದಾಗ ಮಾತ್ರ ನೌಕರ ನಿಶ್ಚಿಂತೆಯಿಂದ ತನ್ನ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.್ತ ನೌಕರನ ಕುಟುಂಬವನ್ನು ಕೂಡ ರಕ್ಷಣೆ ಮಾಡುವ ಜವಾಬ್ದಾರಿ ಸರಕಾರ ಹೊಂದಿರುತ್ತದೆ ಅದಕ್ಕೆ ಪ್ರತಿಯಾಗಿ ಸರಕಾರಿ ನೌಕರ ವಿಧೇಯತೆಯಿಂದ ತನ್ನ ಮೇಲಾಧಿಕಾರಿಗಳಿಗೆ ಗೌರವ ನೀಡುವ ಮೂಲಕ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ ಸರ್ಕಾರದ ಘನತೆ ಗೌರವಗಳನ್ನು ಹೆಚ್ಚಿಸಬೇಕೆಂದರು.
“ಪಾರದರ್ಶಕ ಆಡಳಿತ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ರಾಜಶೇಖರ ದೈವಾಡಿ ಮಾತನಾಡಿ, ಪಾರದರ್ಶಕತೆ ಎಂಬುದು ಮನೆಯಿಂದಲೇ ಪ್ರಾರಂಭವಾಗಬೇಕು. “ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ವಾಣಿಯನ್ನು ನೆನೆಯುತ್ತಾ ಏನಿದ್ದರೇನು ಜೀವನದಲ್ಲಿ ತೃಪ್ತಿ ಕೊಡುವ ವೃತ್ತಿಯನ್ನು ಮಾಡಬೇಕು. ಪ್ರಾಮಾಣಿಕತೆ, ಸಮಯ ಪ್ರಜ್ಞೆ ನೌಕರನ ಮೂಲಮಂತ್ರವಾಗಬೇಕು. ಪ್ರತಿಯೊಂದು ಇಲಾಖೆಯ ಮೇಲಾಧಿಕಾರಿಗಳು ಸಹ ಅಧೀನ ಹಂತದ ಎಲ್ಲ ನೌಕರರಿಗೆ ಗೌರವಿಸುವ ಮೂಲಕ ಆತ್ಮದ ಉನ್ನತಿಯ ಮೂಲಕ ಹೃದಯ ಶ್ರೀಮಂತಿಕೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಸಾಧ್ಯ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಸಲಿಂಗಯ್ಯ ಮಠ, ಗುತ್ತಪ್ಪಗೌಡ ರಾಜಾಪುರ, ಬಿ.ಕೆ ಗೋಟ್ಯಾಳ, ವಿಜಯಲಕ್ಷ್ಮಿ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ ಮಾತನಾಡಿದರು.
ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಪದಾಧಿಕಾರಿಗಳಾದ ಡಾ. ಸಂಗಮೇಶ ಮೇತ್ರಿ, ಸಿದ್ರಾಮಯ್ಯ ಲಕ್ಕುಂಡಿಮಠ. ಅಭಿμÉೀಕ ಚಕ್ರವರ್ತಿ, ರವಿ ಕಿತ್ತೂರ. ಮಹಮ್ಮದಗೌಸ ಹವಾಲ್ದಾರ. ವಿದ್ಯಾವತಿ ಅಂಕಲಗಿ. ಸುರೇಶ ಜತ್ತಿ. ರಜಾಕ ಮುಲ್ಲಾ. ಪ್ರದೀಪ ಕುಲಕರ್ಣಿ. ಕೆ ಎಸ ಹಣಮಾಣಿ. ಅಲಿಸಾಬ ಖಡಕೆ. ಕೆ.ಎಫ್ ಅಂಕಲಗಿ. ಶೋಭಾ ಬಡಿಗೇರ. ಭಾಗೀರತಿ ಸಿಂಧೆ. ಅಮಸಿದ್ದ ಪೂಜಾರಿ. ಶಾಂತಾ ವಿಭೂತಿ. ಕಾದರ ವಾಲೀಕಾರ, ಮಕ್ಬುಲ್ ಕೀಜಿ. ಪರವೀನ ಶೇಖ. ಈ.ಎಸ್. ಬಳ್ಳೂರ. ಎಚ್.ಎಸ್. ದೈವಾಡಿ, ಎನ್.ಕೆ. ಕುಂಬಾರ, ಬಿ.ಎಮ್. ಮಸಬಿನಾಳ ಮುಂತಾದವರು ಉಪಸ್ಥತರಿದ್ದರು.