ಆಹಾರ ಸೇವನೆ ಶೈಲಿ ಅಗತ್ಯ: ಖ್ಯಾಡಗಿ
ವಿಜಯಪುರ,ಸೆ.2:ನಾವು ಸೇವಿಸುವ ಆಹಾರವು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಸರಿಯಾದ ಪೆÇೀಷಕ ತತ್ವಗಳಿಲ್ಲದ ಆಹಾರ ಅನಾರೋಗ್ಯದ ಹಾದಿ. ಅಸಮತೋಲನ ಆಹಾರ ಸೇವನೆ, ಅತಿ ನಿದ್ರೆ, ಆಲಸಿತನದಂತಹ ರೋಗಗಳಿಗೆ ಆಹ್ವಾನ ನೀಡುತ್ತದೆ ಎಂದು ಹಿಟ್ನಳ್ಳಿ ಕೃಷಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕಾಶಿಬಾಯಿ ಖ್ಯಾಡಗಿ ಹೇಳಿದರು.
ವಿಜಯಪುರದ ತಾಜಬಾವಡಿ ಹಿಂಬದಿಯಲ್ಲಿರುವ ಸಿಕ್ಯಾಬ್ ಪ.ಪೂ. ಕಾಲೇಜಿನ ವಿಜ್ಞಾನ ವೇದಿಕೆಯನ್ನು ಉದ್ಘಾಟಿಸಿ “ಆಹಾರ ವಿಜ್ಞಾನ ಮತ್ತು ಪೆÇೀಷಕಾಂಶಗಳು” ವಿಷಯದ ಕುರಿತು ಉಪನ್ಯಾಸನೀಡಿ ಅವರು ಮಾತನಾಡಿದರು.
ಉಚಿತ ಕ್ರಮವಿಲ್ಲದ ಆಹಾರ ಸೇವನೆ ಮಾರಕವಾಗುವುದು. ಆಹಾರ ವಿಜ್ಞಾನವು ಈ ಕುರಿತಾಗಿ ವಿಸ್ತೃತ ಮಾಹಿತಿ ನೀಡುತ್ತದೆ. ತಿಂಡಿ ತಿನಿಸುಗಳು ರಾಸಾಯನಿಕ, ಕೃತಕ ಬಣ್ಣಗಳಿಂದ ಮುಕ್ತವಾಗಿರಬೇಕು. ಆಧುನಿಕ ಪೀಳಿಗೆ ಇದನ್ನು ಅರಿತು ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಖ್ಯಾಶಾಸ್ತ್ರ ಉಪನ್ಯಾಸಕ ಡಾ. ಎಸ್.ಆರ್. ಬ್ಯಾಕೋಡ ವಿಜ್ಞಾನ ವೇದಿಕೆಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದರು.
ಪ್ರಾಚಾರ್ಯೆ ಸುಜಾತಾ ಕೆ. ಕಟ್ಟೀಮನಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕಿ ಆರ್. ಕೆ.ಕೊಕಟನೂರ ವಂದಿಸಿದರು. ಸಂಯೋಜಕಿ ಎಸ್. ಎಂ.ಲಾಹೋರಿ ಶಿಸ್ತುಬದ್ಧವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಡೀನ್ ಎನ್. ಎಸ್. ಭೂಸನೂರ ಕಾರ್ಯಕ್ರಮದ ಮಾರ್ಗದರ್ಶಕರಾಗಿದ್ದರು.