ಸಾಹಿತ್ಯ ಸಂಸ್ಕøತಿಯ ವಾಹಕವಾಗಿದೆ : ಶಿರೂರು
ವಿಜಯಪುರ,ಸೆ.2:ಶಿಕ್ಷಣದ ಪ್ರಾಮುಖ್ಯತೆ ಪ್ರತಿಯೊಬ್ಬರ ಬದುಕಿಗೆ ಅವಶ್ಯಕವಾಗಿದೆ. ಇದು ನಮ್ಮ ಬುದ್ಧಿಶಕ್ತಿಯನ್ನು ಸುಧಾರಿಸುವ ಕೌಶಲ್ಯ ಮತ್ತು ಜ್ಞಾನಕ್ಕೆ ನಮ್ಮನ್ನು ಸಜ್ಜುಗೊಳಿಸುವ ಮೂಲಕ ಜಗತ್ತನ್ನು ಗ್ರಹಿಸುವ ಸಾಮಥ್ರ್ಯವನ್ನು ನೀಡುತ್ತದೆ. ಆತ್ಮಸ್ಥೈರ್ಯವನ್ನು ಬೆಳೆಸಿ ಎದುರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹುಬ್ಬಳ್ಳಿಯ ಪ್ರಜಾವಾಣಿ ದಿನಪತ್ರಿಕೆಯ ಉಪಸಂಪಾದಕÀ ಕೃಷ್ಣಿ ಶಿರೂರು ಹೇಳಿದರು.
ಓದುಗರ ಚಾವಡಿ ಬಳಗದ ಸಿಂಚನ ಕೃತಿ ಬಿಡುಗಡೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯವು ತನ್ನದೇ ಆದ ಛಾಪನ್ನು ಹೊಂದಿರುವುದಲ್ಲದೆ ಸಂಸ್ಕøತಿಯ ವಾಹಕವಾಗಿದೆ ಎಂದರು.
ಡಾ. ಎಂ.ಎಸ್. ಮಾಗಣಗೇರಿ ಸಂಪಾದಿಸಿದ ಸಿಂಚನ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಮಾತನಾಡಿ, ಅರ್ಜಿಗಳನ್ನು ಹಾಕಿ ಪ್ರಶಸ್ತಿಯನ್ನು ಪಡೆಯುವ ದಿನಮಾನದಲ್ಲಿ ಶಿಕ್ಷಕರ ಸಾಮಥ್ರ್ಯವನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಗೌರವಿಸುವ ಕಾರ್ಯ ಓದುಗರ ಚಾವಡಿ ಮಾಡುತ್ತಿರುವುದು ಶ್ಲಾಘನೀಯ. ಅಭಿನವ ಪಂಪ, ನಾಗಚಂದ್ರ, ಸಂತರು, ಸೂಫಿಗಳು, ತತಜ್ಞಾನಿಗಳು ಹಾಗೂ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಹುಟ್ಟಿದಂತ ಈ ಜಿಲ್ಲೆಯಲ್ಲಿ ಪುಸ್ತಕಗಳನ್ನು ಓದುವ ಪರಂಪರೆಯನ್ನು ಹೆಚ್ಚಿಸುವ ಮಹತ್ವದ ಕಾರ್ಯ ಓದುಗರ ಚಾವಡಿ ಮಾಡುತ್ತಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.
ಸಿಂಚನ ಕೃತಿಯನ್ನು ಪರಿಚಯಿಸಿದ ಪತ್ರಕರ್ತ ಪರಶುರಾಮ ಬಾಸಗಿ ಮಾತನಾಡಿ, ಪುಸ್ತಕ ಸಂಸ್ಕøತಿ ಜ್ಞಾನಕ್ಕೆ ಸಮ. ಅದು ನಮ್ಮೆಲ್ಲರ ಬದುಕಿಗೆ ಬೇಕು. ಕನ್ನಡವನ್ನು ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದರು.
ಮುಖ್ಯ ಅತಿಥಿ ಸ್ಥಾನದಿಂದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪ ವಿಭಾಗದ ವಿಸ್ತರಣಾಧಿಕಾರಿ ಸಿಕಂದರಭಕ್ತ ಅಲ್ಲಿಸಾಬ ಜಮಾದಾರ ಮಾತನಾಡಿ, ಕೂಡಿ ಬಾಳುವ ಸಂಸ್ಕøತಿ ಬೆಳೆಸುತ್ತಾ ಸಾಹಿತ್ತಿಕ ಅಧ್ಯಯನ ಮಾಡಿ ಸಮಾಜ ತಿದ್ದುವ ಕೆಲಸ ಓದುವಗರ ಬಳಗ ಮಾಡುತ್ತಿರುವುದು ತುಂಬಾ ಸಂತೋಷದ ಕಾರ್ಯ ಎಂದು ಹೇಳಿದರು.
ನೇತ್ರತಜ್ಞ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡ ಪಾಟೀಲ (ಚಬನೂರ) ಮಾತನಾಡಿ, ಮಕ್ಕಳನ್ನು ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಅಣಿಗೊಳಿಸಿ ತಾತ್ವಿಕ ತಳಹದಿ ಮೇಲೆ ಸಾತ್ವಿಕ ಸಮಾಜವನ್ನು ಕಟ್ಟಿ, ಅರ್ಥಪೂರ್ಣವಾಗಿ ಬದುಕುವ ಕಲೆ ಶಿಕ್ಷಕರಿಂದ ಮಕ್ಕಳಿಗೆ ಹರಿದು ಬರಲಿ ಎಂದರು.
ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ತಿಮ್ಮಾಪುರದ ಕಲ್ಯಾಣ ಆಶ್ರಮದ ಶ್ರೀ ಮಹಾಂತೇಶ್ವರ ಮಠದ ಪ. ಪೂಜ್ಯ ಮಹಾಂತ ಸ್ವಾಮಿಗಳು ಮಾತನಾಡಿ, ಸರಳ ಬದುಕನ್ನು ಕಟ್ಟಿಕೊಂಡು ವಸುದೈವ ಕುಟುಂಬಕಂ ಎಂಬ ವಾತಾವರಣವನ್ನು ಸೃಷ್ಟಿಸಿ ಉತ್ತಮವಾದ ಸಂಸ್ಕøತಿಯನ್ನು ಬೆಳೆಸುವ ಸಂಸ್ಕಾರವನ್ನು ಬಿತ್ತುವ ಕಾರ್ಯವನ್ನು ಓದುಗರ ಚಾವಡಿ ಮಾಡುತ್ತಿರುವುದು ಶ್ಲಾಘನೀಯ. ಭಾವೈಕ್ಯತೆಯಿಂದ ಕೂಡಿದ ಸೌಹಾರ್ಧವಾದ ವಾತಾವರಣವನ್ನು ನೋಡಿದಾಗ 12ನೇ ಶತಮಾನದ ಶರಣರ ಅನುಭವ ಮಂಟಪ ನೆನಪಾಗುತ್ತದÉ ಎಂದರು. ಬಳಗದ ಅಧ್ಯಕ್ಷÀ ಶರಣು ಸಬರದ ಹಾಗೂ ಗೌರವಾಧ್ಯಕ್ಷÀ ಬಿ.ಆರ್. ಬನಸೋಡೆ ಉಪಸ್ಥಿತರಿದ್ದರು.
ವೇದಿಕೆಯ ಮೇಲೆ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಸಕ್ರಿ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಅಧ್ಯಾಪಕÀ ಡಾ. ಈ.ಡಿ. ಕೊಟ್ನಾಳ, ಕೃಷಿ ಮಹಾವಿದ್ಯಾಲಯದ ಡಾ. ಜಿ ಶ್ರೀನಿವಾಸಲು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷÀ ಶಶಿಕಲಾ ನಾಯ್ಕೋಡಿ, ಪೂಜಾ ಪ್ರೆಸ್ ಮಾಲೀಕÀ ಚಂದ್ರಶೇಖರ ಬುರಾಣಪುರ, ಡೆವಲಪರ್ ಹಾಜಿ ಮಸ್ತಾನ ಗೌಂಡಿ, ಮಹದೇವ ಕುರೆ, ಸುವಿಧಾ ಸಂಸ್ಥೆಯ ಅಧ್ಯಕ್ಷ ಫಯಾಜ್ ಕಲಾದಗಿ, ಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ, ಸಿಂಚನ ಕೃತಿ ಸಂಪಾದಕ ಡಾ. ಎಂ. ಎಸ್. ಮಾಗಣಗೇರಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಾಧಕ ಪ್ರಶಸ್ತಿಗೆ ಆಯ್ಕೆಯಾದ 20 ಜನ ಸಾಧಕರನ್ನು ಹಾಗೂ 50 ಜನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಚಾವಡಿ ಬಳಗದ ಹಿರಿಯ ಸದಸ್ಯರಾದ ಪ್ರೊ. ಯು.ಎನ್ ಕುಂಟೋಜಿ, ಡಾ. ರಾಜಕುಮಾರ ಜೊಲ್ಲೆ, ರಾಜಶೇಖರ ಉಮರಾಣಿ, ಮನು ಪತ್ತಾರ, ಬಸವರಾಜ ಕುಂಬಾರ ಹಾಗೂ ಚಾವಡಿಯ ಬಳಗದ ಸದಸ್ಯರು ಉಪಸ್ಥಿತರಿದ್ದರು.