ಅಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಅಣೆಪ್ಪಾ ತೊಂಟೆ ಸೇವಾ ವಯೋನಿವೃತ್ತಿ, ಬಿಳ್ಕೋಡುಗೆ
ಹುಮನಾಬಾದ್: ಸೆ.2:ತಾಲ್ಲೂಕಿನ ಅಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಅಣ್ಣೆಪ್ಪಾ ತೊಂಟೆ ಅವರು ತಮ್ಮ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಪ್ರಯುಕ್ತ, ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ, ಬಿಳ್ಕೋಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ ಅವರು ಮಾತನಾಡಿ, ಅಣೆಪ್ಪಾ ತೊಂಟೆ ಅವರು ಅಲ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರುಗಳಾಗಿ ಉತ್ತಮ ಸೇವೆ ಸಲ್ಲಿಸಿದ ಇವರು ಸರಳ, ಸಜ್ಜನಿಕೆಯ ಮತ್ತು ಮಕ್ಕಳ ಅಚ್ಚು ಮೇಚ್ಚಿನ ಶಿಕ್ಷಕರಲ್ಲಿ ಒಬ್ಬರಾಗಿದ್ದಾರೆ, ಎಂದು ತಿಳಿಸಿದರು.
ಅಣೆಪ್ಪಾ ತೊಂಟೆ ಅವರು ಈಗಾಗಲೇ ಸಿಂದಬಂದಗಿ, ಡಾಕುಳಗಿ, ವರವಟ್ಟಿ(ಕೆ), ಸೇರಿದಂತೆ ಅಲ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಪಾರದರ್ಶಕವಾಗಿ ಸೇವೆ ಸಲ್ಲಿಸಿದ್ದಾರೆ, ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ತಾತ್ಯಾರಾವ ಕಾಂಬಳೆ ಅವರು ಮಾತನಾಡಿ, ಶಿಕ್ಷಕರ ವೃತ್ತಿಯನ್ನು ಈ ಜಗತ್ತಿನಲ್ಲಿ ಅತ್ಯತ್ತಮ ಮತ್ತು ಆದರ್ಶ ವೃತ್ತಿ ಎಂದು ಪರಿಗಣ ಸಲಾಗಿದೆ. ಏಕೆಂದರೆ ಶಿಕ್ಷಕರು ನಿಸ್ವಾರ್ಥವಾಗಿ ಒಬ್ಬರ ಜೀವನವನ್ನು ರೂಪಿಸುವಲ್ಲಿ ತಮ್ಮ ಸೇವೆಯನ್ನು ನೀಡುತ್ತಾರೆ ಅವರ ಸಮರ್ಪಿತ ಕೆಲಸವನ್ನು ಬೇರೆ ಯಾವುದೇ ಕೆಲಸದೊಂದಿಗೆ ಹೋಲಿಸಲಾಗುವುದಿಲ್ಲ ಅದೆ ತರಹ ಅಣ್ಣೆಪ್ಪಾ ತೊಂಟೆ ರವರು ಅಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎನ್ನುವುದಕ್ಕೆ ಇವತ್ತಿನ ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿದ ಜನರೆ ಸಾಕ್ಷಿ ಎಂದು ಗೂಣಗಾನ ಮಾಡಿದರು.
ಶಿಕ್ಷಕ ರಾಮಚಂದ್ರ ಬಾಪನೋರ್ ಅವರು ಮಾತನಾಡಿ, ಮುಖ್ಯಗುರು ಅಣೆಪ್ಪಾ ತೊಂಟೆ ರವರು ಒಬ್ಬ ಅದ್ಭುತ ಶಿಕ್ಷಕರಾಗಿ ನಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಒಬ್ಬ ಶಿಕ್ಷಕ ತನ್ನ ಜ್ಞಾನ, ತಾಳ್ಮೆ, ಪ್ರೀತಿ ಮತ್ತು ಕಾಳಜಿಯಿಂದ ವಿದ್ಯಾರ್ಥಿಗಳ ಜೀವನಕ್ಕೆ ಬಲವಾದ ಅಕಾರವನ್ನು ನೀಡುವಂತಹ ಪ್ರಮುಖ ವ್ಯಕ್ತಿಯೆ ಶಿಕ್ಷಕ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿಎಂ.ಸಿ ಅಧ್ಯಕ್ಷ ರಾಜಕುಮಾರ ಪರೀಟ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರಡ್ಡಿ ಮಾಲಿ ಪಾಟೀಲ್, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುರಗೇಂದ್ರ ಸಜ್ಜನಶಟ್ಟಿ, ಸಿಆರ್‍ಪಿ ಮಲ್ಲಯ್ಯ ಸ್ವಾಮಿ, ಪ್ರಮುಖರಾದ ಎಚ್.ಎಸ್. ದೇಶಮುಖ, ಅಶೋಕ ಚಾಮರಡ್ಡಿ, ಶ್ರೀಕಾಂತ ಸೂಗಿ, ಚಂದ್ರಶೇಖರ ಪಾಟೀಲ್, ಮಲ್ಲಮ್ಮ ಹೊನ್ನಗೊಂಡ, ಮಾಥರ್ಂಡಪ್ಪ, ಅಮಿತ ಚಿಂಚೋಳಿಕರ್, ಮಂಜುನಾಥ, ಶಂಭುಲಿಂಗ ರೋಗನ್, ಶ್ರೀಧರ ಚವ್ಹಾಣ, ಶಿವರಾಜ ಮೇತ್ರೆ, ವೀರಣ್ಣಾ ಕುಂಬಾರ, ಭೀಮರಾವ್ ಪ್ರಸಾದ, ಶಿಕ್ಷಕರಾದ, ಇಂದ್ರಕಾಂತ ದೊಡ್ಡಿ, ಅತಿಥಿ ಶಿಕ್ಷಕಿ ಗುಂಡಮ್ಮಾ ಮರಖಲ್, ಇದ್ದರು.