ವಿಶ್ವ ಪ್ರವಚನ ಸಮಾರೋಪ ಸೆ.3ಕ್ಕೆ
ಬೀದರ್, ಸೆ 02 : ಬೀದರ್ ಜಿಲ್ಲೆಯಲ್ಲಿ ಬಸವ ಧರ್ಮ ಪೀಠದ ವತಿಯಿಂದ ಲಾಡಗೆರಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆಪ್ಟೆಂಬರ್ 3 ರಂದು ಮಧ್ಯಾಹ್ನ 1 ಗಂಟೆಗೆ “ವಿಶ್ವ ಧರ್ಮ ಪ್ರವಚನ ಕಾರ್ಯಕ್ರಮ”ದ ಸಮಾರೋಪ ಸಮಾರಂಭ ಬಸವ ಧರ್ಮ ಪೀಠ ಕೂಡಲ ಸಂಗಮದ ಪೀಠಾಧ್ಯಕ್ಷ ಪರಮ ಪ್ರಜ್ಯಶ್ರೀ ಮಹಾ ಜಗದ್ಗುರು ಮಾತೆ ಗಂಗಾದೇವಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಧಾರ್ಮಿಕ ಸಮಾರಂಭಕ್ಕೆ ತಾವುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಬಸವೇಶ್ವರ ದೇವಸ್ಥಾನ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು ಪರಮ ಪೂಜ್ಯಶ್ರೀ ಮಾತೆ ವಿಜಯಾಂಬಿಕೆ ಅವರು ಸತತವಾಗಿ ಒಂದು ತಿಂಗಳುಕಾಲ ವಿಶ್ವ ಧರ್ಮ ಪ್ರವಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.