ವೃತ್ತಿಗೆ ನಿವೃತಿಯಿದೆ, ಪ್ರವೃತ್ತಿಗಿಲ್ಲ:ಡಿಡಿಪಿಯು ಶಾಹಾಬಾದಕರ್
ಭಾಲ್ಕಿ:ಸೆ.2: ವೃತ್ತಿ ಯಾವುದೇ ಆಗಿದ್ದರೂ ನಿಷ್ಠೆ, ಪ್ರಾಮಾಣೀಕತೆಯಿಂದ ನಿರ್ವಹಿಸಬೇಕು.ಇದರಿಂದ ಸಮಾಜದಲ್ಲಿ ವಿಶ್ವಾಸ ,ಗೌರವ ವೃದ್ಧಿಸುತ್ತದೆ. ವೃತ್ತಿಗೆ ನಿವೃತ್ತಿಯಿದೆ ಹೊರತು ನಾವು ಮಾಡುವ ಕೆಲಸಕ್ಕಿಲ್ಲ ಎಂದು ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಹೇಳಿದರು.
್ಕಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಯೋನಿವೃತ್ತ ಪ್ರಾಂಶುಪಾಲ ಶಿವರಾಜ ಬೆಲ್ಲಾಪುರೆ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆಯಾಗಿದೆ. ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು. ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆ ತಂದು ಅವರ ಭವಿಷ್ಯ ಉಜ್ವಲಗೊಳಿಸುವ ಶಕ್ತಿ ಶಿಕ್ಷಕರಲ್ಲಿದೆ. ಶ್ರದ್ಧೆಯಿಂದ ಸೇವೆ ಸಲ್ಲಿಸಿ,ಯಾವುದೇ ಕಪ್ಪುಚುಕ್ಕೆಯಿಲ್ಲದೇ ನಿವೃತ್ತಿ ಹೊಂದಿದ ಶಿವರಾಜ ಬೆಲ್ಲಾಪುರೆ ಅವರ ನಿವೃತ್ತಿ ಜೀವನ ಆಯುರಾರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಯೋನಿವೃತ್ತ ಪ್ರಾಂಶುಪಾಲ ಶಿವರಾಜ ಬೆಲ್ಲಾಪುರೆ, ಪ್ರತಿಯೊಬ್ಬರೂ ವೃತ್ತಿಪರ ಗೌರವ ಹೊಂದಿರಬೇಕು. ಜನರಿಗೆ ಕೈಲಾದಷ್ಟು ಸಹಾಯ, ಸಹಕಾರ ನೀಡುವುದು ಸಮಾಜದ ಋಣ ಸಂದಾಯದ ಒಂದು ಭಾಗವಾಗುತ್ತದೆ ಎಂದು ಹೇಳಿ ವೃತ್ತಿ ಜೀವನದ ಅನುಭವ ಹಂಚಿಕೊಂಡರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ ಅಕ್ಕಣ್ಣ, ಕಾರ್ಯದರ್ಶಿ ಡಾ.ಮನ್ಮಥ ಡೋಳೆ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ ಸೂರ್ಯವಂಶಿ, ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ, ನಿವೃತ್ತ ಪ್ರಾಚಾರ್ಯ ಸಿದ್ದಣ್ಣ ಮಾರಪಳ್ಳಿ, ಉಪನ್ಯಾಸಕ ಪರಶುರಾಮ, ಮಾರುತಿ ಸಗರ ಮಾತನಾಡಿ, ಶಿವರಾಜ ಬೆಲ್ಲಾಪುರೆ ಅತ್ಯಂತ ಸ್ನೇಹ ಜೀವಿ, ಸರಳ ಸಜ್ಜನಿಕೆಗೆ ಪಾತ್ರರಾಗಿ ವಿದ್ಯಾರ್ಥಿ ಪಾಲಕರ ಹೃದಯ ಗೆದ್ದು ನಿಷ್ಕಳಂಕವಾಗಿ ವೃತ್ತಿಯಿಂದ ನಿವೃತ್ತಿ ಹೊಂದಿದ್ದು ಅತ್ಯಂತ ಅಭಿಮಾನದ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸಂಘದ ಕಾರ್ಯದರ್ಶಿ ಶಿವರಾಜ ಪಾಟೀಲ್ ಅಲಿಯಾಬಾದ,ಅಂಬಾಜಿ ಹಳ್ಳಿಖೆಡೆ,ಪಂಡರಿ ಹುಗ್ಗಿ ,ಪ್ರೊ.ಅಶೋಕ ಬಿರಾದಾರ, ಅಮರ ಹಲ್ಮಂಡಗೆ,ಶಿವರಾಜ ಬೊರಾಳೆ, ಜೈಕಾಂತ ಗಂಗೋಜಿ, ಚಂದ್ರಕಾಂತ ಬಿರಾದಾರ,ಶಂಕರ ರಾಜೋಳೆ, ಸರಸ್ವತಿ ಹಳ್ಳೆಕರ, ಅನೀತಾ ಸೂರ್ಯವಂಶಿ, ಬಸವರಾಜ ನೆಲವಾಡೆ, ಲಕ್ಷ್ಮಣ ಉಡಬಾಳೆ, ಪಮೀತಾ ಸಿನ್ಹಾ, ಲಕ್ಷ್ಮೀ, ಕಲಾವತಿ ಡೊಂಗರೆ, ಡಾ.ಪಪ್ಪು ಮೇತ್ರಿ, ಸುನೀತಾ ಮಾರ್ಕ್, ಆರ್.ಎಮ್.ಪಾಟೀಲ, ಡಿ.ಜಿ.ಬಿರಾದಾರ, ಜಿ.ಟಿ.ಜಾಧವ,ಸಂತೋಷ ಸಿರ್ಸೆ,ಸುಭಾಷ ಗೊಬರೆ,ಸಂಗಮೇಶ ಸೋನಾರ,ನಿರಂಜಪ್ಪ ಪಾತ್ರೆ, ವೆಂಕಟರಾವ,ಚನ್ನವೀರಯ್ಯ ಚಕ್ರಸಾಲಿ,ಭಾವುರಾವ ನೆಲವಾಡೆ, ರಾಜಕುಮಾರ ಕಳಮಾಸೆ,ಸಂಜೀವ ಚೆನ್ನಾಳೆ, ಧನರಾಜ ಪವಾರ, ರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದಿಲೀಪ ತಾರೆ ಅವರು ಶಿವರಾಜ ಬೆಲ್ಲಾಪುರೆ ಕುರಿತು ಸ್ವರಚಿತ ಕವನ ಹಾಡಿದರು.ಪ್ರ.ಪ್ರಾ. ಸುಖದೇವ ಬಿರಾದಾರ ಸ್ವಾಗತಿಸಿದರು. ಸುಂದರರಾಜ ನಿರೂಪಿಸಿದರು. ಬಾಲಾಜಿ ಜಾಧವ ವಂದಿಸಿದರು.