ಪುಟಾಣಿಗಳಲ್ಲಿ ಕ್ರೀಡಾಶಕ್ತಿ ವೃದ್ಧಿಸಲಿ : ಶೃತಿ ಬಿರಾದಾರ
ಭಾಲ್ಕಿ: ಸೆ.2:ಪುಟಾಣಿ ಮಕ್ಕಳಲ್ಲಿ ಕ್ರೀಡಾಶಕ್ತಿ ವೃದ್ಧಿಸಿದಾಗ ಅವರ ದೈಹಿಕ ಮತ್ತು ಮಾನಸಿಕ ವಿಕಸನ ವಾಗುವುದು ಎಂದು ಅಥರ್ವ ಪೂರ್ವಪ್ರಾಥಮಿಕ ಶಾಲೆಯ ಮುಖ್ಯಸ್ಥೆ ಶೃತಿ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.
ಪಟ್ಟಣದ ಅಥರ್ವ ಪೂರ್ವಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಬರೀ ಓದುವುದು, ಬರೆಯುವುದೇ ಮಾಡಿಸಲಾಗುತ್ತಿದೆ. ಅವರಿಗೆ ಆಟದಲ್ಲಿಯ ಆಸಕ್ತಿ ಕಡಿಮೆ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸುವ ಕಾರ್ಯವಾಗಬೇಕು. ಪುಟಾಣಿ ಮಕ್ಕಳು ಆಟದೊಂದಿಗೆ ಪಾಠ ಕಲಿಯುವಂತಾಗಬೇಕು. ಮಕ್ಕಳಲ್ಲಿ ಕ್ರೀಯಾಶೀಲತೆ ಹೆಚ್ಚಿರುತ್ತದೆ. ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಟ್ಟು ಅವರ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಹೇಳಿದರು.
ಶಿಕ್ಷಕಿ ಜಯಾ ದೇಶಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾಧಿಕಾರಿ ಪ್ರಕಾಶ ಬಿರಾದಾರ, ಪಾಲಕರಾದ ಶೈಲೇಶ ಮಾಲಪಾಣಿ, ಶಶಿಕಾಂತ ವೈರಾಗೆ, ವಾಸು ಶರ್ಮಾ, ಶಿವಪುತ್ರ ಹಲಂಗೆ ಮತ್ತಿತರರು ಇದ್ದರು.