ಹಿಂದುಳಿದ ವರ್ಗಗಳ ಒಕ್ಕೂಟದಿಂದ ಕಪ್ಪು ಪಟ್ಟಿ ಪ್ರದರ್ಶನ
ಕೋಲಾರ,ಸೆ,೨:ಕರ್ನಾಟಕ ರಾಜ್ಯಪಾಲರು ನಾಳೆ ಬೆಂಗಳೂರು ಉತ್ತರ ವಿಶ್ವವಿದ್ಯಾಯಲಯದ ೪ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕೆ ಅಗಮಿಸಿರುವ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಪಕ್ಷದ ಹಿಂದುಳಿದ ವರ್ಗಗಳ ಒಕ್ಕೂಟವು ಕಪ್ಪು ಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟಿಸುತ್ತಿರುವುದಾಗಿ ಒಕ್ಕೂಟದಲ್ಲಿನ ಕುರುಬ ಸಮಾಜದ ಮುಖಂಡ ಅಂಜನಿ ಸೋಮಣ್ಣ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯದಲ್ಲಿ ಬಿಜೆಪಿ ಪಕ್ಷದ ಕೈಗೊಂಬೆಯಾಗಿ ತಾರತಮ್ಯವಾದ ಗೊಂದಲದ ಆಡಳಿತ ನಿರ್ವಹಿಸುತ್ತಿರುವುದನ್ನು ಅಹಿಂದ ವರ್ಗಗಳು ಮಾತ್ರವಲ್ಲ ಇಡೀ ರಾಜ್ಯವೇ ತೀವ್ರವಾದ ಪ್ರತಿಭಟನೆ ನಡೆಸುತ್ತಿದ್ದರೂ ಪಂಚೇಂದ್ರಿಯಗಳನ್ನು ಕಳೆದು ಕೊಂಡವರಂತೆ ಇರುವುದನ್ನು ತೀವ್ರವಾಗಿ ಖಂಡಿಸುತ್ತಿರುವುದಾಗಿ ಹೇಳಿದರು,
ರಾಜ್ಯದಲ್ಲಿ ಕಳೆದ ದಶಕಗಳಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಯಾವೂದೇ ಭ್ರಷ್ಟಚಾರ ಇಲ್ಲದೆ, ನಿಷ್ಠೆ, ಪ್ರಮಾಣಿಕವಾಗಿ ಆಡಳಿತ ನಿರ್ವಹಿಸಿದ್ದಾರೆ. ಅವರ ವಿರುದ್ದ ಸಂವಿಧಾನ ಪಿ.ಸಿ.ಕಾಯ್ದೆ ೧೭ ಎ ಅಡಿ ಪೂರ್ವಾನುಮತಿ ಬೇಕು .ಅದರೆ ೧೭ಎ ಪಾಲನೆಯಾಗದಿದ್ದರೂ ರಾಜ್ಯಪಾಲರು ಪ್ರಾಸಿಕ್ಯೋಷನ್‌ಗೆ ಅನುಮತಿಸಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಪೊಲೀಸ್ ಅಧಿಕಾರಿಗಳ ಅನುಮತಿ ಪಡೆಯದೆ ತನಿಖೆ ಮಾಡುವಂತಿಲ್ಲ ಈ ಕುರಿತು ನ್ಯಾಯಾಲಯದ ಕಾನೂನು ಸಮರದಲ್ಲಿ ಗುರುತರವಾದ ದೂರುಗಳು ಹಾಗೂ ದಾಖಲೆಗಳು ಇಲ್ಲವಾದರೂ ದೂರು ದಾಖಲಿಸಿ ಪ್ರಾಸಿಕ್ಯೋಷನ್‌ಗೆ ನೀಡಿರುವ ಕುರಿತು ಅಸಮಾಧನ ವ್ಯಕ್ತ ಪಡೆಸಿದೆ ಎಂದರು.
ನಗರಸಭಾ ಸದಸ್ಯ ಪ್ರಸಾದ್ ಬಾಬು ಮಾತನಾಡಿ ರಾಜ್ಯಪಾಲರು ತಮ್ಮ ಘನತೆಗೆ ತಕ್ಕಂತೆ ಸಂವಿಧಾನ ಬದ್ದವಾದ ನಡೆಯನ್ನು ಪಾಲಿಸದೆ ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿರುವುದು ಸಮಂಜಸವಲ್ಲ ಇದರ ವಿರುದ್ದ ಹಿಂದುಳಿದ ವರ್ಗಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿ ರಾಜ್ಯಪಾಲರ ತಾರತಮ್ಯ ಆಡಳಿತವನ್ನು ಖಂಡಿಸುತ್ತಿದ್ದೇವೆ ಎಂದು ಹೇಳಿದರು,
ದೆಹಲಿಯ ಮಾದರಿಯಲ್ಲಿ ಎ,ಪಿ.ಪಿ. ಪಕ್ಷದ ಮುಖ್ಯಮಂತ್ರಿ ಅವರನ್ನು ಕಾರಗೃಹಕ್ಕೆ ನೊಕಲು ಬಳಿಸಿದ ತಂತ್ರದಂತೆ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಮಧ್ಯ ಪ್ರವೇಶಿಸುವಂತೆ ಮಾಡಿದೆ. ನ್ಯಾಯಲಯಗಳಲ್ಲಿ ದಂಡಗಳನ್ನು ಪಾವತಿಸಿದ್ದ ಆಸಾಮಿಯನ್ನು ಬಳಿಸಿ ಕೊಂಡು ರಾಜ್ಯಪಾಲರಿಗೆ ದೂರು ಕೊಡಿಸಿ ಅದಕ್ಕೆ ೨೪ ಗಂಟೆಯಲ್ಲಿ ಸ್ಪಂದಿಸುವ ಮೂಲಕ ಸಿದ್ದರಾಮಯ್ಯನವರಿಗೆ ನೋಟಿಸ್ ಜಾರಿ ಮಾಡಿ ನಂತರ ಪ್ರಸಿಕ್ಯೋಷನ್‌ಗೆ ಒಳಪಡೆಸುವ ಮೂಲಕ ಅಡಳಿತ ಚುಕ್ಕಾಣಿ ಹಿಡಿಯಲು ವಾಮಮಾರ್ಗಗಳನ್ನು ಬಳಿಸುತ್ತಿರುವುದಕ್ಕೆ ಖಂಡಿಸುತ್ತೇವೆ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಕುಡಾ ಅಧ್ಯಕ್ಷ ಹನೀಫ್, ಅಬ್ದುಲ್ ಖಯ್ಯುಂ, ಕೋಚಿಮುಲ್ ನಿರ್ದೇಶಕ ಷರೀಫ್, ನಗರಸಭೆ ಮಾಜಿ ಸದಸ್ಯ ಸಲಾವುದ್ದೀನ್ ಬಾಬು, ಮುಖಂಡರಾದ ಮುಸ್ತಾಫ್, ಗ್ಯಾರೆಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕುರಿಗಳ ರಮೇಶ್ ಮಡಿವಾಳ ಗೋಪಾಲ್, ಪಾಲ್ಗುಣ ಮುಂತಾದವರು ಉಪಸ್ಥಿತರಿದ್ದರು.