ಅರ್ಜಿ ಸಲ್ಲಿಸಲು ಸೆ. 8 ಕೊನೆಯ ದಿನ:ಕಸಾಪ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ
ಅಫಜಲಪುರ: ಸೆ.2:ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸಮ್ಮೇಳನ ಸರ್ವಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತಂತೆ ಕಸಾಪ ತಾಲೂಕು ಅಧ್ಯಕ್ಷ ಪ್ರಭು ಫುಲಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಕನ್ನಡಾಭಿಮಾನಿಗಳ ಆಶಯದಂತೆ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗಾಗಿ ಸೂಕ್ತ ಅರ್ಹತೆ ಹೊಂದಿದ ವ್ಯಕ್ತಿಯನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲು ಕೈಗೊಳ್ಳಬೇಕಾದ ಮಾನದಂಡಗಳ ಆಧಾರದ ನಿರ್ಧರಿಸೋಣ ಎಂದರು.
ನಂತರ ಸೆಪ್ಟೆಂಬರ್ 8 ರ ಒಳಗಾಗಿ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಬೇಕು. ಬಳಿಕ ಸೆಪ್ಟೆಂಬರ್ 15ರಂದು ರವಿವಾರ 10 ಗಂಟೆಗೆ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಕನ್ನಡಾಭಿಮಾನಿಗಳು ಹಾಗೂ ಪರಿಷತ್ತಿನ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಕೂಡಿಕೊಂಡು ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಹಾಗೂ ಸಮ್ಮೇಳನದ ದಿನಾಂಕ ನಿಗದಿಪಡಿಸುವ ಕುರಿತು ಚರ್ಚಿಸಲಾಯಿತು.
ಸೆಪ್ಟೆಂಬರ್ 8ರ ಒಳಗಾಗಿ ಅರ್ಜಿ ಸಲ್ಲಿಸುವವರು ಪರಿಷತ್ತಿನ ಕಾರ್ಯದರ್ಶಿ ಸಿದ್ದಾರಾಮ ಶಿವಣಗಿ 9611113828 ಅವರಿಗೆ ಸಂಪರ್ಕಿಸಲು ಕೋರಲಾಯಿತು.
ಸಭೆಯನ್ನುದ್ದೇಶಿಸಿ ಪ್ರಮುಖರಾದ ಬಸಣ್ಣಾ ಗುಣಾರಿ, ಮಲ್ಲಯ್ಯ ಹೊಸಮಠ, ವಿಶ್ವನಾಥ ಹೇರೂರ, ಡಾ. ಸಂಗಣ್ಣ ಸಿಂಗೆ, ಬಾಪುಗೌಡ ಬಿರಾದಾರ, ಬಸವರಾಜ ನಿಂಬರ್ಗಿ, ಶಕೀಲ್ ಚೌಧರಿ, ಬಾಹುಬಲಿ ಮಾಲಗತ್ತಿ, ಚಂದು ಬನ್ನಟ್ಟಿ, ಪ್ರಭಾವತಿ ಮೇತ್ರಿ, ಅರುಣಕುಮಾರ ಹೂಗಾರ ಅನೇಕರು ಮಾತನಾಡಿದರು.
ಈ ವೇಳೆ ಬೀರಣ್ಣ ಕನಕ ಟೇಲರ್, ಸಿದ್ದಾರಾಮ ಶಿವಣಗಿ, ಸೋಂದುಸಾಬ ಬಾಗವಾನ, ರವಿ ಗೌರ, ಸಿದ್ದು ಪೂಜಾರಿ, ಸಾಯಬಣ್ಣ ಜಮಾದಾರ, ರಹೀಮ ಖೇಡಗಿ, ಸುಭಾಷ ತೇಲಿ, ನಾಗೇಶ ಬಿಲ್ವಾಡ, ಪ್ರತಿಭಾ ಮಹೀಂದ್ರಕರ, ನಿಂಗಪ್ಪ ಪೂಜಾರಿ, ಶಿವಶರಣ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.