ಕನ್ನಡ ರಥಕ್ಕೆ ಸ್ವಾಗತ
ಬೈಲಹೊಂಗಲ,ಅ.3: ಡಿಸೆಂಬರ್ ತಿಂಗಳಿನಲ್ಲಿ ಮoಡ್ಯದಲ್ಲಿ ನಡೆಯಲಿರುವ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿರುವ ಕನ್ನಡ ಜ್ಯೋತಿಯನ್ನು ಹೊತ್ತು ಪಟ್ಟಣದ ಬೆಳಗಾವಿ ರಸ್ತೆಯಲ್ಲಿನ ಚನ್ನಮ್ಮಾಜಿ ವೃತ್ತದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಅದ್ದೂರಿಯಾಗಿ ಸ್ವಾಗತಿಸಿದರು.
ಸಮ್ಮೇಳನದ ಹಿನ್ನೆಲೆಯಲ್ಲಿ ನಾಡಿನಾದ್ಯoತ ಸಂಚರಿಸಿ ಕನ್ನಡದ ಕಂಪು ಎಲ್ಲೆಡೆ ಪಸರಿಸುತ್ತಿರುವ ಕಾರ್ಯಕ್ಕೆ ಬೈಲಹೊಂಗಲ ನಾಡಿನ ಜನತೆಯ ಪರವಾಗಿ ಶುಭ ಕೋರಲಾಯಿತು.
ಕುಂಭಮೇಳ, ಡೊಳ್ಳುವಾದ್ಯದೊಂದಿಗೆ ವೀರಮಾತೆ ಚನ್ನಮ್ಮಾಜಿ ಐಕ್ಯ ಸ್ಥಳದವರೆಗೆ ಜಾಥಾ ಸಾಗಿತು.
ಕಸಾಪ ಜಿಲ್ಲಾದ್ಯಕ್ಷೆ, ಶ್ರೀಮತಿ ಮಂಗಳಾ ಮೆಟಗುಡ್ಡ, ಶರಣೆ ಪ್ರೇಮಕ್ಕ ಅಂಗಡಿ,
ತಹಸೀಲ್ದಾರ್ ಹನಮಂತ ಶಿರಹಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿರೇಶ ಹಸಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎನ್. ಪ್ಯಾಟಿ,ತಾಲೂಕು ಆರೋಗ್ಯಾಧಿಕಾರಿ ಸಂಜಯ ಸಿದ್ದಣ್ಣವರ,ಕರ್ನಾಟಕ ನವ ನಿರ್ಮಾಣ ಪಡೆ ಜಿಲ್ಲಾಧ್ಯಕ್ಷ, ಮಹಾಂತೇಶ ತುರಮರಿ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ,ಕಸಾಪ ತಾಲೂಕು ಅಧ್ಯಕ್ಷ,ಎನ್. ಆರ್.ಠಕ್ಕಾಯಿ
ಬಿಜೆಪಿ ಮಂಡಲ ಅಧ್ಯಕ್ಷ, ಸುಭಾಷ ತುರಮರಿ,ಬಿ. ಎನ್. ಚಿಕ್ಕನಗೌಡರ,
ಯುವ ಮುಖಂಡರಾದ ಸಂತೋಷ ಹಡಪದ, ಕಿರಣ ಶಿರವಂತಿ, ಅರುಣ ತುರಮರಿ ಸೇರಿದಂತೆ ತಾಲೂಕು ಆಡಳಿತ, ಪುರಸಭೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಜಾಥಾ ದಲ್ಲಿ ಭಾಗಿಯಾಗಿದ್ದರು.