ಗಾಂಧೀಜಿ, ಶಾಸ್ತ್ರೀಜಿಯವರ ಜೀವನ ತತ್ವ ಅನುಸರಿಸಬೇಕು
ಕುಂದಗೋಳ,ಅ3 : ಪ್ರತಿಯೊಬ್ಬರು ಗಾಂಧೀಜಿ ಮತ್ತು ಲಾಲಾ ಬಹದ್ದೂರ್ ಶಾಸ್ತ್ರೀಜಿ ಜೀವನ ತತ್ವಗಳನ್ನು ಅನುಸರಿಸಬೇಕು. ಸರಳ ಜೀವನ ಉದಾತ್ತ ವಿಚಾರಗಳು ನಮ್ಮ ಜೀವನಕ್ಕೆ ಹೆಚ್ಚು ಸಹಕಾರಿಗಳಾಗುತ್ತವೇ ಎಂದು ಮುಖ್ಯ ಶಿಕ್ಷಕ ಗುರುಸ್ವಾಮಿ ಬಾಳಿಹಳ್ಳಿಮಠ ಹೇಳಿದರು.
ಅವರು ಇಲ್ಲಿನ ಗಾಂಧಿ ಹಿಂದಿ ವಿದ್ಯಾಪೀಠ ಕುಂದಗೋಳ ಶ್ರೀ ಎಫ್.ಕೆ.ಬಾಳಿಹಳ್ಳಿಮಠ ಪಿಪಿಎಸ್ ಮತ್ತು ಎಚ್‍ಪಿಎಸ್ ಮತ್ತು ಎಸ್‍ಪಿಎಸ್ ಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಂಧಿಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾನಿಧ್ಯವನ್ನು ಸಂಸ್ಥಾಪಕ ಮತ್ತು ಕಾರ್ಯದರ್ಶಿ ಎಫ್.ಕೆ.ಬಾಳಿಹಳ್ಳಿಮಠ ವಹಿಸಿದ್ದರು. ಸಮಿತಿ ಅಧ್ಯಕ್ಷ ಮಾರುತಿ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.
ಕೈರುನ್ನಿಶಾ ಹಿಂಡಸಗೇರಿ, ಬಾಬೂಬಿ ಮುಳಗುಂದ, ಲಕ್ಷ್ಮೀ ಕಲಾಲ್, ಮುಖ್ಯೋಪಾಧ್ಯಾಯಿನಿ ಶಾರದ ನಂದಿಮಠ, ಬಿ.ಎಚ್. ಚಲವಾದಿ, ಎ.ಬಿ. ಕುಂಬಾರ್, ಮಂಜುಳಾ ಭೋವಿ, ಬಸವರಾಜ ತೆಳಗಿನಮನಿ ಇತರರು ಭಾಗವಹಿಸಿದ್ದರು.
ಅಶೋಕ್ ವಾಗಮೋಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯೋಪಾಧ್ಯಾಯಿನಿ ಅಂಬಿಕಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.ಎಂ.ಸಿ. ಪಾಟೀಲ್ ಸ್ವಾಗತಿಸಿ, ವಂದಿಸಿದರು.