ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ
ಅಂಕಲಿ,ಅ3: ಸ್ಥಳೀಯ ಶ್ರೀ ಗೋಮಟೇಶ ಶಿಕ್ಷಣ ಸಂಸ್ಥೆಯ, ಡಾ. ಎನ್‍ಎ ಮಗದುಮ್ ಸಿಬಿಎಸ್‍ಸಿ ಶಾಲೆಯಲ್ಲಿದೇಶ ಕಂಡ ಅಪ್ರತಿಮ ಮೇಧಾವಿಗಳಾದ ಗಾಂಧೀಜಿ ಹಾಗೂ ಶಾಸ್ತ್ರಿಜಿ ಜಯಂತಿಯನ್ನು ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕರಾದ ಡಾ. ಎನ್ ಎ ಮಗದುಮ್ ರವರು ಗಾಂಧಿ ಹಾಗೂ ಶಾಸ್ತ್ರೀಜಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಅವರು ವಿದ್ಯಾರ್ಥಿಗಳಿಗೆ ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾನ ವ್ಯಕ್ತಿಗಳಾದ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆ ಮಂತ್ರದಿಂದ ದೇಶದ ಜನರಿಗೆ ಸ್ವಾತಂತ್ರ ನೀಡುವುದರಲ್ಲಿ ಮಹಾತ್ಮ ಎನಿಸಿಕೊಂಡರು .ಅದೇ ರೀತಿ ಶಾಸ್ತ್ರೀಜಿರವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿದರು .ಅಂತಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಇಂದಿನ ಯುವಕರು ನಾಳಿನ ದೇಶ ಕಟ್ಟುವ ಒಳ್ಳೆಯ ವಿದ್ಯಾರ್ಥಿಗಳಾಗ ಬೇಕೆಂದು ಹೇಳಿದರು .ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಓ . S ನಿಡುಗುಂಡೆ, ಹಿರಿಯ ಶಿಕ್ಷಕರಾದ S.S.ಒoಟಿe ಹಾಗೂ ವಿದ್ಯಾರ್ಥಿಗಳು ಶಾಸ್ತ್ರೀ ಹಾಗೂ ಗಾಂಧೀಜಿ ಬಗ್ಗೆ ಮಾತನಾಡಿದರು .
ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.