ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ದಸ್ತಗೀರ ಮಾಲಿ ಪಟೇಲ್
ಕಲಬುರಗಿ.ಸೆ.2: ಜಿಲ್ಲೆಯ ಅಫಜಲಪೂರ ತಾಲೂಕಿನ ಮಾತೋಳಿ ಗ್ರಾಮದವರಾದ ದಸ್ತಗೀರ್ ಶೇಖ್ ಮಾಲಿ ಪಟೇಲ್ ಅವರು ಸುಮಾರು 38 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸಾರ್ವಜನಿಕರವಾಗಿ ಗುರ್ತಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಪಟೇಲ್‍ರವರ ವಯೋ ಸೇವಾ ನಿವೃತ್ತಿ ಹೊಂದಿದ್ದ ಸಂದರ್ಭದಲ್ಲಿ ಅವಲೋಕಿಸಿದಾಗ ಅವರು ಭಾರತೀಯ ಸೇನೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ವಿರೋಧಿಗಳ ವಿರುದ್ಧ ಹೋರಾಡಿ ಪದಕವನ್ನು ಪಡೆದಿರುವುದು ಎಂಬುದು ಹೆಮ್ಮೆ ಸಂಗತಿ.
ಭಾರತೀಯ ಸೇನಾ ಸೇವೆ ಮುಗಿದ ತದ ನಂತರ ದಸ್ತಗೀರ ಅವರು ಪೊಲೀಸ್ ಇಲಾಖೆಗೆ ಸೇರಿಕೊಂಡು ಸುಮಾರು ಹದಿನೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆ ಗಳಿಸಿರುವ ದಸ್ತಗೀರ್ ಅವರು ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಸಿಎಆರ್ ಮುಖ್ಯಪೇದೆ ಹುದ್ದೆಯಿಂದ ವಯೋ ಸೇವಾ ನಿವೃತ್ತಿಯನ್ನು ಹೊಂದಿದ್ದಾರೆ.
ವಯೋ ನಿವೃತ್ತಿ ಸಮಾರಂಭವು ನಗರದ ಪೊಲೀಸ್ ಆಯುಕ್ತರ ಕಾರ್ಯಲಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಶರಣಪ್ಪಾ ಎಸ್‍ಡಿ ಅವರು ದಸ್ತಗೀರ್ ಪಟೇಲ್‍ರನ್ನು ಸನ್ಮಾನಿಸಿ ಅವರ ಸೇವೆಯನ್ನು ಕೊಂಡಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ಆಯುಕ್ತರಾದ ಕನ್ನಿಕಾ ಶೇಕ್‍ರಿವಾಲಾ, ಸಿಬ್ಬಂದಿ ವರ್ಗದವರು ಸೇರದಿಂತೆ ಆರ್‍ಪಿಐ ಕಾರ್ ಯುನಿಟ್ ಮಹಾದೇವ ಪಟೇಲ್, ಸಮೀರ್ ಪಟೇಲ್ ಮತ್ತು ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.