ಶ್ರಾವಣ ಮಾಸ ಪ್ರಯುಕ್ತ ವಿಶೇಷ ಪೂಜೆ
ಕೆ.ಆರ್.ಪುರ, ಸೆ.೨- ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಷಡಾಕ್ಷರ ಬ್ರಹ್ಮ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹದೇವಪುರ ಕ್ಷೇತ್ರದ ಇಮ್ಮಡಿಹಳ್ಳಿಯಲ್ಲಿ ಕ್ರೋಧಿ ನಾಮ ಸಂವತ್ಸರದ ಶ್ರಾವಣ ಮಾಸದ ಮನೆ-ಮನೆಗಳಲ್ಲಿ ಶಿವಪೂಜೆ ಹಾಗೂ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಈ ಶ್ರಾವಣ ಮಾಸದಲ್ಲಿ ಶಿವಪೂಜೆಯನ್ನು ಮಾಡುವ ಮೂಲಕ ನಮ್ಮ ಪುಣ್ಯ ಕಾರ್ಯಗಳನ್ನು ಹೆಚ್ಚಿಸುತ್ತ ದೇವರಿಗೆ ಗುರುಗಳ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ದೇವರ ಆಶೀರ್ವಾದ ಸಿಗುತ್ತದೆ ಎಂದು ತಿಳಿಸಿದರು.
ಲೋಕಕಲ್ಯಾಣಾರ್ಥವಾಗಿ ಮಾಡುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆಗೆ ಪ್ರಾರ್ಥಿಸುವಂತೆ ಸಲಹೆ ನೀಡಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ವಿಶೇಚ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಶ್ರಾವಣದಲ್ಲಿ ಗುರುಗಳ ಪಾದಪೂಜೆ, ಗುರುಗಳ ಸಾನಿಧ್ಯದಲ್ಲಿರುವುದು ಪವಿತ್ರವಾಗಿರುವ ಕೆಲಸ ಮತ್ತು ಈ ಮಾಸದಲ್ಲಿ ಯಾರು ಗುರು ಸೇವೆ ಮಾಡುತ್ತಾರೋ ಅಂತಹವರಿಗೆ ದೇವರು ಒಲಿಯುತ್ತಾರೆ ಎನ್ನುವ ನಂಬಿಕೆಯಿದೆ ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ದೇವರ ಕೃಪೆ ಹೆಚ್ಚಾಗಿರಲಿದ್ದು,ಸಮಾಜಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಈ ವೇಳೆ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಂದ್ರ ಮೋದಿ, ಗುರುಬಸಣ್ಣ, ರವಿಚಂದ್ರ, ಯೋಗಿಶ್ ಅರಾದ್ಯ, ಶ್ರೀನಿವಾಸ್ ಗೌಡ, ಪ್ರಕಾಶ್, ಪದಾಧಿಕಾರಿಗಳು, ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.