ಮಾನಸಿಕ ಅಸ್ವಸ್ಥೆ ಕೊಲೆ.ಸಿಸಿ ಟಿವಿಯಿಂದ ಪತ್ತೆಯಾದ  ಕಾಮುಕ ಆರೋಪಿ.
ಕೂಡ್ಲಿಗಿ. ಸೆ. 2 :- ಮಾನಸಿಕ ಅಸ್ವಸ್ಥೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಯಾರಿಗೂ ಗೊತ್ತಾಗಬಾರದು ಎಂದು ಆಕೆಯನ್ನು ಕಲ್ಲಿನಿಂದ ಚಚ್ಚಿ ಕೊಲೆ ಮಾಡಿದ್ದ ಪ್ರಕರಣ ಶನಿವಾರ ಬೆಳಿಗ್ಗೆ ದಾಖಲಾಗಿತ್ತು ಇದನ್ನು  ಬೆನ್ನತ್ತಿದ ಪೊಲೀಸರು ಸಿಸಿ ಟಿವಿಯ ವಿಡಿಯೋ ಸಹಾಯದ ಪತ್ತೆ ಕಾರ್ಯದಿಂದ ಎರಡೇ  ದಿನದಲ್ಲಿ ಕಾಮುಕ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ  ಪೊಲೀಸರ ತಂಡ  ಯಶಸ್ವಿಯಾಗಿದೆ.
ಕಾತ್ರಿಕೆನಹಟ್ಟಿಯ ಕಾಟ್ರಹಳ್ಳಿ ಓಬಣ್ಣ (30) ಪೊಲೀಸರ ವಶದಲ್ಲಿರುವ ಕಾಮುಕ ಆರೋಪಿಯಾಗಿದ್ದಾನೆ.
ಈತನು ಆಗಾಗ್ಗೆ ಮಾನಸಿಕ ಅಸ್ವಸ್ಥೆ ನೇತ್ರಮ್ಮ (30)ಅವಳನ್ನು ಜೊತೆಗೆ  ಕರೆದುಕೊಂಡು ಹೋಗುತ್ತಿದ್ದ ಎಂದು ತಿಳಿದಿದ್ದು ಅಲ್ಲದೆ ಕೊಲೆಯಾದ ದಿನದ ಬಗ್ಗೆ ಪ್ರಕರಣ ಬೆನ್ನತ್ತಿದ ಪೊಲೀಸರ ತನಿಖೆ ವೇಳೆ ಈಕೆಯನ್ನು ಕರೆದುಕೊಂಡು ಹೋಗಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದೆ ಇದರಿಂದ ಪೋಲೀಸರ ಆರೋಪಿ ಪತ್ತೆ ಕಾರ್ಯ ಸುಗಮವಾಗಿದೆ ಎಂದು ತಿಳಿದಿದೆ.
ಶುಕ್ರವಾರವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಅಬ್ಬೆನಹಳ್ಳಿ ಗ್ರಾಮದ ಮಾನಸಿಕ ಅಸ್ವಸ್ಥೆ ನೇತ್ರಮ್ಮ (30) ಅವಳನ್ನು ಅದೇ ಗ್ರಾಮದ ಕಾಕಯ್ಯ ಎಂಬಾತನು ಕರೆದುಕೊಂಡು ಹೋಗಿ ಆಕೆಯನ್ನು ಅತ್ಯಾಚಾರವೆಸಗಿ  ಶನಿವಾರ ಬೆಳಗಿನ ಜಾವದ ಮದ್ಯಾವಧಿಯಲ್ಲಿ ಕೂಡ್ಲಿಗಿ ತಾಲೂಕಿನ ಗಡಿಗ್ರಾಮದ ಹೊರವಲಯದ ಪಂಪ್ ಹೌಸ್ ಹತ್ತಿರ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಬಗ್ಗೆ ಮೃತಳ ಸಹೋದರಿ ದುರುಗಮ್ಮ ದೂರು ನೀಡಿದ್ದಳು. ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಅಧೀಕ್ಷಕರಾದ ಶ್ರೀಹರಿಬಾಬು, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಾಸ್ವಾಮಿ ಹಾಗೂ ಹೊಸಹಳ್ಳಿ ಪಿಎಸ್ಐ ಸಿದ್ರಾಮ ಬಿದರಾಣಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ತಂಡ ರಚನೆ : ಕೊಲೆ ಪ್ರಕರಣವನ್ನು ಭೇದಿಸಲು ಎಸ್ಪಿ ಶ್ರೀಹರಿಬಾಬು ಹಾಗೂ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಅವರುಗಳ ಮಾರ್ಗದರ್ಶನದಲ್ಲಿ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ ತನಿಖಾ ತಂಡದ ಮುಂದಾಳತ್ವದಲ್ಲಿ ಕಾನಾಹೊಸಹಳ್ಳಿ ಪಿಎಸ್ಐ ಸಿದ್ರಾಮ ಬಿದರಾಣಿ ಮತ್ತು ಸಿಬ್ಬಂದಿಗಳಾದ ಕೃಷ್ಣಪ್ಪ, ಅಂಗಡಿ ಕೊಟ್ರೇಶ, ವಿಜಯಕುಮಾರ್ ಮಂಜುನಾಥ, ಅಂಜನಾಮೂರ್ತಿ, ಕಲ್ಲೇಶಪುಜಾರ್, ವಿಜಯಕುಮಾರ್, ಎನ್ ಎಂ ಸ್ವಾಮಿ, ಸಂದೀಪ್, ಸಿದ್ದಲಿಂಗಪ್ಪ, ಚಾಲಕರಾದ ಕೃಷ್ಣನಾಯ್ಕ್, ಗೌಡ್ರು ರವಿಚಂದ್ರ, ಕೊಟ್ಟೂರು ಹಾಗೂ ಕೂಡ್ಲಿಗಿ ಅಪರಾಧವಿಭಾಗದ ಸಿಬ್ಬಂದಿಗಳ ತಂಡ ರಚನೆ ಮಾಡಲಾಗಿ
ಚಳ್ಳಕೆರೆ ತಾಲೂಕಿನ  ಅಬ್ಬೆನಹಳ್ಳಿ ಗ್ರಾಮದಿಂದ ಮಾನಸಿಕ ಅಸ್ವಸ್ಥೆ ನೇತ್ರಮ್ಮಳನ್ನು ಕರೆದುಕೊಂಡು ಬಂದ ವ್ಯಕ್ತಿ ಕಾಕಯ್ಯ ಅಲ್ಲ ಕೂಡ್ಲಿಗಿ ತಾಲೂಕು ಕಾತ್ರಿಕೆನಹಟ್ಟಿಯ ಕಾಟ್ರಾಹಳ್ಳಿ ಓಬಣ್ಣ ಎಂದು ಪೊಲೀಸರು ತನಿಖಾ ಸಮಯದಲ್ಲಿ ಸಿಕ್ಕ ಸಿಸಿ ಟಿವಿಯ ವಿಡಿಯೋ ದೃಶ್ಯಾವಳಿಯಿಂದ  ತಿಳಿದಿದ್ದು ಭಾನುವಾರ ಬೆಳಿಗ್ಗೆ ಕಾಟ್ರಾಹಳ್ಳಿ ಓಬಣ್ಣನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಆಗಾಗ ನೇತ್ರಮ್ಮಳನ್ನು ಕರೆದುಕೊಂಡು ಹೋಗುವ ಬಗ್ಗೆ ತಿಳಿಸಿದ ಆರೋಪಿ ಶುಕ್ರವಾರ ಸಹ ಅಬ್ಬೆನಹಳ್ಳಿಯಿಂದ ತಿಪ್ಪೇಹಳ್ಳಿ ಹೊರವಲಯದ ಪಂಪ್ ಹೌಸ್ ಹತ್ತಿರ ಕರೆದುಕೊಂಡು ಹೋಗಿ ಅಂದು ರಾತ್ರಿ ಆಕೆಯನ್ನು ಅತ್ಯಾಚಾರವೆಸಗಿ ಯಾರಿಗೂ ಗೊತ್ತಾಗಬಾರದು ಎಂದು ಅಂದೇ ರಾತ್ರಿ ಕಲ್ಲಿನಿಂದ ಚಚ್ಚಿ  ಕೊಲೆಮಾಡಿ ಬೆಳಗಿನ ಜಾವದವರೆಗೆ ಇದ್ದು ತಪ್ಪಿಸಿಕೊಂಡು ಹೋಗಿರುವ ಬಗ್ಗೆ ಆರೋಪಿ ಓಬಣ್ಣ ತಪ್ಪೋಪ್ಪಿಕೊಂಡಿದ್ದಾನೆ ಎಂದು ತಿಳಿದಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಪ್ರಶಂಸೆ : ಕೂಡ್ಲಿಗಿ ತಾಲೂಕಿನ ಗಡಿಗ್ರಾಮದ ಹತ್ತಿರ ಮಾನಸಿಕ ಅಸ್ವಸ್ಥೆ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಬೆನ್ನತ್ತಿ ಆರೋಪಿಯನ್ನು ಎರಡೇ ದಿನದಲ್ಲಿ ಬಂಧಿಸಲು ಯಶಸ್ವಿಯಾದ ಕೊಟ್ಟೂರು ಹಾಗೂ ಕಾನಾಹೊಸಹಳ್ಳಿ ಪೊಲೀಸರ ತಂಡದ ಕಾರ್ಯಕ್ಕೆ ವಿಜಯನಗರ ಜಿಲ್ಲಾ ಅಧೀಕ್ಷಕರಾದ ಶ್ರೀಹರಿಬಾಬು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.