ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಾಜ ಕಟ್ಟಲು ಸಾಧ್ಯ:ಕಡಕೋಳ ಶ್ರೀ
ಯಡ್ರಾಮಿ:ಸೆ.2:ವೀರಶೈವ ಲಿಂಗಾಯತರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಾಜ ಕಟ್ಟಲು ಸಾಧ್ಯವಾಗುವುದು ಎಂದು ಪಟ್ಟಣದ ಬಸವೇಶ್ವರ ಆವರಣದಲ್ಲಿ ರವಿವಾರ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಅಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಡಾ.ರುದ್ರಮುನಿ ಮಹಾಸ್ವಾಮಿಗಳು ಕಡಕೋಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತರು ಬಲಿಷ್ಠವಾದ ಸಮಾಜವಾಗಿದ್ದು.ರಾಜ್ಯದಲ್ಲಿ ಹಲವಾರು ರಾಜ್ಯದ ಮುಖ್ಯಮಂತ್ರಿ ಸಂಸದರು ಸಚಿವರು ಆಗಿ ಹೋಗಿದ್ದಾರೆ.
ಇಂದಿನ ದಿನಮಾನದಲ್ಲಿ ಸಮಾಜ ಅಳುವಿನ ಅಂಚಿನಲ್ಲಿ ಸಾಗುತ್ತಿದೆ.ಆದ್ದರಿಂದ ಪ್ರತಿಯೊಬ್ಬರು ರಾಜಕೀಯ ರಹಿತವಾಗಿ ಒಗ್ಗಟ್ಟಿನಿಂದ ಸಮಾಜ ಕಟ್ಟುವ ಕೆಲಸಾ ಮಾಡುವ ಜೋತೆಗೆ ಇತರರಿಗೂ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸಮಾಜ ಯುವಕರು ಮಧ್ಯದ ದಾಸರಾಗುತ್ತಿದ್ದು ಸಮಾಜದ ಮುಖಂಡರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಸಮಾಜದ ಇತಿಹಾಸ ತಿಳಿಸುವ ಕಾರ್ಯ ಮಾಡಬೇಕು ಎಂದು ಸಮಾಜದ ಮುಖಂಡರಿಗೆ ಕಿವಿ ಮಾತು ಹೇಳಿದರು.
ದೊಡ್ಡಪ್ಪಗೌಡ ಪಾಟೀಲ ನರಬೋಳಿ ಮಾಜಿ ಶಾಸಕರು ಜೇವರ್ಗಿ ಅವರು ಮಾತನಾಡಿ.ವೀರಶೈವ ಲಿಂಗಾಯತರು ರಾಜಕೀಯ ರಹಿತವಾಗಿ ಸಮಾಜ ಕಟ್ಟಲು ಮುಂದಾಗಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಸಮಾಜದ ಪ್ರತಿಯೊಬ್ಬರು ಸಾಮಾಜದ ಕಾರ್ಯಗಳ ಬಗ್ಗೆ ಒತ್ತು ನೀಡಬೇಕು.ಸಮಾಜದ ಯುವಕರು ಹಾಗೂ ಯುವತಿಯರಿಗೆ ಹಾಸ್ಟೆಲ್ ವ್ಯವಸ್ಧೆ ಇಲ್ಲದೆ ಕಾಲೇಜು ಬಿಡುವ ಪರಸ್ಥಿತಿ ಇದ್ದು ತಕ್ಷಣ ಮಕ್ಕಳಿಗೆ ಉತ್ತಮ ಹಾಸ್ಟೆಲ್ ಒದಗಿಸುವ ಕೆಲಸಾ ಆಗಬೇಕು ಎಂದು ಒತ್ತಾಯ ಮಾಡಿದರು.
ಸಾಮಾಜಕ್ಕೆ ರಾಜಕೀಯ ರಹಿತವಾಗಿ ಸರ್ಕಾರ ಸೌಲಭ್ಯಗಳು ಒದಗಿಸುವ ಕಾರ್ಯ ವೀರಶೈವದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡವ ಕೆಲಸಾ ಮಾಡಬೇಕು ಎಂದು ಸಲಹೆ ನೀಡಾದರು.
ಈ ಸಂದರ್ಭದಲ್ಲಿ ಸಾನಿಧ್ಯ ಪೂಜ್ಯ ಕೆಂಚ ಋಷಿಭೇಂದ್ರ ಶಿವಾಚಾರ್ಯರು ಸಂಸ್ಥಾನ ಮಠ ಆಲೂರ,ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ,ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣುಕುಮಾರ ಮೋದಿ,ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಂತೋಷ ಪಾಟೀಲ,ರಾಜಶೇಖರ ಸೀರಿ,ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಕಲ್ಲಹಂಗರಗಾ, ಮಲ್ಲನಗೌಡ ಪಾಟೀಲ ನೇದಲಗಿ, ಜೇವರ್ಗಿ ಯಡ್ರಾಮಿ ತಾಲೂಕು ಅಧ್ಯಕ್ಷ ಅಧ್ಯಕ್ಷ ಸಿದ್ದು ಅಂಗಡಿ,ಮಾಜಿ ಜಿಪಂ ಸದಸ್ಯ ದಂಡಪ್ಪ ಸಾಹು ಕುಳಗೇರಿ,ಚಂದ್ರಶೇಖರ ಪುರಾಣಿಕ,ಶರಣು ಗುಗ್ಗರಿ, ದೇವಿಂದ್ರಪ್ಪಗೌಡ ಬಿರಾದಾರ,ಸಿದ್ದಣ್ಣ ಸಾಹು ಹೂಗಾರ,ಮಹಾನಿಂಗಪ್ಪಗೌಡ ಬಂಡೆಪ್ಪಗೋಳ, ಗುರುಬಸಪ್ಪ ಸಾಹು ಸಣ್ಣಳ್ಳಿ,ಸಿದ್ದನಗೌಡ ಮಾಲಿಪಾಟೀಲ,ಬಸಲಿಂಗಪ್ಪ ಸಾಹು ಅಂಕಲಕೋಟಿ,ಶ್ರೀಶೈಲ ಸಾಹು ತಾಳಿಕೋಟಿ, ರಾಜಶೇಖರ ಡಗ್ಗಾ,ಅಪ್ಪುಗೌಡ ಪಾಟೀಲ, ನಿಂಗನಗೌಡ ಜವಳಗಿ,ಚನ್ನವೀರಪ್ಪಗೌಡ ಬಂಡೆಪ್ಪಗೋಳ,ಶಂಬುಲಿಂಗ ತಾಳಿಕೋಟಿ, ರೇವಣಸಿದ್ದಪ್ಪ ಅಂಕಲಕೋಟಿ,ಆನಂದ ಯತ್ನಾಳ, ನಿಂಗರಾಜ ಪಟ್ಟಣಶೆಟ್ಟಿ,ಬಸವರಾಜ ಹೂಗಾರ, ಪ್ರಭುದೇವ ಜವಳಗಿ,ಭಗವಂತ್ರಾಯ ಶಿವಣ್ಣವರ, ಅಣ್ಣಯ್ಯ ಹಿರೇಮಠ,ಬಸವರಾಜ ಸಾಹು ದೊಡ್ಡಳ್ಳಿ ಹಾಗೂ ಪದಾಧಿಕಾರಿಗಳು ಇತರರು ಇದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಹಾಗೂ ರಾಜ್ಯ ಕಾರ್ಯನಿರ್ವಾಹಕ ಮತ್ತು ತಾಲೂಕು ಅಧ್ಯಕ್ಷ ಪದಾಧಿಕಾರಿಗಳನ್ನು ಸಮಾಜದ ವತಿಯಿಂದ ಸನ್ಮಾನ ಮಾಡಲಾಯಿತ್ತು.