ಮತ್ತೆ ತುಂಬಲಾರಂಭಿಸಿದೆ ತುಂಗಭದ್ರೆ :  ಮತ್ತೊಮ್ಮೆ ಕಾಣಸಿಗಲಿದೆ ರಮಣೀಯ ದೃಶ್ಯ.
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಸೆ.02: ತುಂಗಭದ್ರಾ ಜಲಾಶಯ ತುಂಬಿದರೂ ತಪ್ಪಲಿಲ್ಲಾ ಭವಣೆ ಎಂಬ ಆತಂಕ ದೂರವಾಗಿ ಮತ್ತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು  ತುಂಬುವ ಹಂತಕ್ಕೆ ಬಂದು ನಿಂತಿದೆ ತುಂಗಭದ್ರಾ ಜಲಾಶಯ.
19ನೇ ಗೇಟೆ ಒಡೆದು 40 ಟಿಎಂಸಿ ನೀರು ಕಡೆಮೆಯಾಗಿದ್ದು ತುಂಗಭದ್ರೆ ತುಂಬಿದರೂ ತಪ್ಪಲಿಲ್ಲಾ ಬವಣೆ ಎಂಬ ಆತಂಕ ದೂರಮಾಡಲು ತಾತ್ಕಾಲಿಕ ಗೇಟ್ ಅಳವಡಿಸುವ ಮೂಲಕ ನೀರುಳಿಸುವ ಪ್ರಯತ್ನ ಮಾಡಿದ್ದು ಸಫಲತೆಯನ್ನು ತುಂಗಭದ್ರಾ ಮಂಡಳಿ ಕಂಡಿದೆ. ಮತ್ತೊಮ್ಮೆ ಜಲಾಶಯ ನಂಬಿದ ಜನತೆ
ಎರಡನೇ ಬೆಳೆ ಸೇರಿದಂತೆ ಕುಡಿಯುಲು ನೀರು ಸಿಗಲಿದೆ ಎಂಬ ನಿಟ್ಟುಸಿರು ಬಿಡುವಂತಾಗಿದೆ.
ತಾತ್ಕಾಲಿಕ ಗೇಟ್ ಅಳವಡಿಕೆಯ ಪರಿಣಾಮ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು ನಿರಂತರವಾಗಿ ಏರಿಕೆ ಕಾಣುತ್ತೀದೆ ಮತ್ತೊಮ್ಮ ತುಂಬುವ ಅಂತಕ್ಕೆ ಬಂದಿದ್ದು ಕರ್ನಾಟಕ, ಆಂದ್ರಾ ಹಾಗೂ ತೆಲಂಗಾಣ ರಾಜ್ಯದ ಜನತೆಗೆ ನೆಮ್ಮದಿ ತಂದಿದೆ.
ಸದ್ಯ 98 ,ಟಿಎಂಸಿ ನೀರು ಜಲಾಶಯದಲ್ಲಿ  ಸಂಗ್ರಹವಾಗಿದೆ. ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಬಹುದು ಎಂಬುದು ಸತ್ಯವಾಗಿದ್ದು ಅಚ್ಚರಿಯೇ ಸರಿಯಾಗಿದ್ದು .
98.101 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಮಟ್ಟ 1633.00 ಅಡಿ ಇದ್ದು, ಈಗ 1631.06 ಅಡಿಯವರೆಗೆ ನೀರು ಬಂದಿದೆ. ಜಲಾಶಯದ ಒಳ ಹರಿವು 30031ಕ್ಯುಸೆಕ್ ಆಗಿದ್ದು ಹೊರಹರಿವು 15237ಕ್ಯುಸೆಕ್ ಆಗಿದ್ದು ಇನ್ನೂ ಒಂದುವಾರ ಇದೆ ಪ್ರಮಾಣ ಮುಂದುವರೆದರೆ ತುಂಗಭದ್ರೆ ಮತ್ತೆ ತುಂಬಿ ಅದೆ ರಮಣೀಯ ದೃಶ್ಯಕ್ಕೆ ಸಾಕ್ಷಿಯಾಗಲಿದೆ.