ಶ್ರೀಕೃಷ್ಣನ ಭವ್ಯ ಮೆರವಣಿಗೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ2: ಕೃಷ್ಣ ಜನ್ಮಾಷ್ಠಮಿ ನಿಮಿತ್ತ ತ್ರೈತ ಸಿದ್ಧಾಂತ ಪ್ರಬೋಧ ಸೇವಾಸಮಿತಿ, ಜ್ಞಾನ ವೇದಿಕೆ ವತಿಯಿಂದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಭಾನುವಾರ ಶ್ರೀಕೃಷ್ಣನ ಭವ್ಯ ಮೆರವಣಿಗೆ ಭಾನುವಾರ ನಡೆಯಿತು.
ಸಮಿತಿ ಅಧ್ಯಕ್ಷ ವೀರಯ್ಯ ಪಲ್ಲಿ ಅವರು ಮಾತನಾಡಿ, ಭಗವಂತ ಮಾನವನಾಗಿ ಅವತರಿಸಿ ಮಾನವನಾಗಿ ಜನ್ಮ ತಾಳಿದರೆ ಆತನನ್ನು ದೇವರು ಎನ್ನುತ್ತೇವೆ. ಅಂತಹ ದೇವರನ್ನು ಶ್ರೀ ಕೃಷ್ಣ ಎಂದು ಕರೆಯುತ್ತೇವೆ, ಆತನನ್ನು ಮಾತ್ರ ಎಲ್ಲರೂ ಪರಮಾತ್ಮನೆಂದು ಗುರುತಿಸಬೇಕು.
ಪ್ರಬೋಧ ಸೇವಾ ಸಮಿತಿಯ ಸದಸ್ಯರು ಗ್ರಾಮದ ಎಲ್ಲರನ್ನು ಸಂತುಷ್ಟರನ್ನಾಗಿಸಲು ಶ್ರೀ ಕೃಷ್ಣನ ಮೆರವಣಿಗೆಯ ಮುಖ್ಯ ಉದ್ದೇಶವಾಗಿದೆ ಎಂದರು. ಸಮಿತಿ ಸದಸ್ಯರಾದ ಶ್ರೀದೇವಿ ಗಾರು, ರಾಘವೇಂದ್ರ ಶ್ರೇಷ್ಠಿ, ಲಕ್ಷ್ಮೀ ರೆಡ್ಡಿ, ಶ್ರೀನಿವಾಸುಲು, ಕೃಷ್ಣ, ಸುಧಾಕರ ಅರುಣಾ, ಕೃಷ್ಣವೇಣಿ, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.