ಶ್ರೀ ಗೂಳ್ಯದ ಗಾದಿಲಿಂಗೇಶ್ವರ ಪುರಾಣ ಪ್ರವಚನ:ಉಚಿತ ಸಾಮೂಹಿಕ ವಿವಾಹ ಮಹೋತ್ಸವ
ಸಂಜೆವಾಣಿ ವಾರ್ತೆ
ಹೊಸಪೇಟೆ  ಸೆ2:  ಶ್ರೀ ಗೂಳ್ಯದ ಗಾದಿಲಿಂಗೇಶ್ವರ ಪುರಾಣ ಪ್ರವಚನದ 31ನೇ ವರ್ಷದ ಪ್ರಯುಕ್ತ ತಾಲ್ಲೂಕಿನ ಪಾಪಿನಾಯಕನ ಹಳ್ಳಿ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಶ್ರೀ ಅಂಕಲಿಮಠದ ನಿರುಪಧೀಶ್ವರ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆರ್ಶಿವಚನ ನೀಡಿ, ಹೊಸ ದಾಂಪತ್ಯಕ್ಕೆ ಅಡಿ ಇಟ್ಟಿರುವ ನೂತನ ವಧುವರರು, ಪರಸ್ಪರ ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಜೀವನದಲ್ಲಿ ಬರುವ ಎಲ್ಲಾ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ, ಸಮಾಜದಲ್ಲಿ ಆದರ್ಶ ದಂಪತಿಗಳಾಗಿ ಬಾಳಬೇಕು. ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ-ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎನ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಉಚಿತ ಸಮೂಹಿಕ ವಿವಾಹ ಕಾರ್ಯಕ್ರಮಗಳು ಬಡ-ಮದ್ಯಮ ವರ್ಗದ ಜನರ ಪಾಲಿಗೆ ವರದಾನವಾಗಿದೆ. ಸಮೂಹಿಕ ವಿವಾಹಗಳಿಂದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘ-ಸಂಸ್ಥೆಗಳು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಗಣಿ ಮಾಲೀಕ ಗೊಗ್ಗ ರಾಜಣ್ಣ, ಗ್ರಾಮದ ಮುಖಂಡ ಕೆಎಂ ಹಾಲಪ್ಪ , ಮೇಟಿ ಪಂಪಾಪತಿ, ಕೇ ತಿಪ್ಪೇಸ್ವಾಮಿ, ಎನ್ ತಿಪ್ಪೇಸ್ವಾಮಿ, ಡಿ ರಾಮು, ವಿ ಗುರುರಾಜ, ಕೆ ಅಯ್ಯಪ್ಪ,  ಕೆ ಮಲ್ಲೇಶಪ್ಪ, ಚೋಳ ರಾಜೇಂದ್ರ ಮೇಟಿ, ಕೆ ಮುರಳಿದರ, ಎನ್ ಅಂಕಲೇಶ, ಕೆ ಜಯಪ್ಪ, ಕೆ ತಾಯಪ್ಪ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. .