ಹಬೋಹಳ್ಳಿ : ವಾಲ್ಮೀಕಿ ಸಮುದಾಯದಿಂದ ಪ್ರತಿಭಾ ಪುರಸ್ಕಾರ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ.ಸೆ.02 ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ವಾಲ್ಮೀಕಿ ನಾಯಕ ನೌಕರರ ಸಂಘ ದಿಂದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಾಸಕ ಕೆ ನೇಮಿರಾಜ್ ನಾಯ್ಕ್ ಉದ್ಘಾಟಿಸಿ ಮಾತನಾಡಿದರು. ಶೋಷಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ದುರುಪಯೋಗ ಆಗಿದ್ದನ್ನು ಪಕ್ಷತೀತವಾಗಿ ಖಂಡಿಸಬೇಕು. ರಾಜ್ಯದಲ್ಲಿಯೇ ಕಂಡರೆಯದ ವಾಲ್ಮೀಕಿ ನಿಗಮದ ಹಗರಣ ನಡೆದುಹೋಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ಬಳಸಬೇಕಾಗಿದ್ದ ಅನುದಾನ ದುರ್ಬಳಕೆ ಆಗಿದ್ದನ್ನು ಯಾರೇ ಆಗಿರಲಿ ಅದನ್ನು ವಿರೋಧಿಸಬೇಕು. ಚುನಾವಣೆಯ ಮುಂಚೆ ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಸರ್ವೇಸಾಮಾನ್ಯ ಚುನಾವಣೆಯ ಬಳಿಕ ಅದನ್ನೆಲ್ಲ ಮರೆತು ಅಭಿವೃದ್ಧಿಗೆ ನಾವು ಕೈಜೋಡಿಸಬೇಕು.
ಯಾವುದೇ ಪಕ್ಷದವರಾಗಿರಲಿ ನಮ್ಮ ಬಳಿ ಯಾವುದೇ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದರು. ಕೇಂದ್ರ ಸರ್ಕಾರದ ಅನುದಾನ ಇರದಿದ್ದರೆ. ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಬೇಟೆ ನೀಡುವುದು ಕಷ್ಟಕರವಾಗುತ್ತಿತ್ತು. ಕೆಕೆಆರ್‌ಡಿಬಿ ಅನುದಾನ ಮತ್ತು ಖನಿಜ ನಿಧಿ ಅಭಿವೃದ್ದಿಗೆ ಸಹಕಾರಿಯಾಗಿದೆ. ವಾಲ್ಮೀಕಿ ಭವನದ ಕಾಮಗಾರಿ ಸಂಪೂರ್ಣಗೊಳ್ಳಲು ಅನುದಾನ ಒದಗಿಸುಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
 ನೌಕರ ಸಂಘದ ಅಧ್ಯಕ್ಷ ಬಿ ಚಂದ್ರಮಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ವಾಲ್ಮೀಕಿ ಸಂಘದ ತಾಲೂಕ ಅಧ್ಯಕ್ಷ ಟಿ ವೆಂಕೋಬಪ್ಪ ಶಾಸಕರಿಗೆ 25 ಲಕ್ಷ ರೂ. ಅನುದಾನ ಕೋರಿ ಮನವಿ ಸಲ್ಲಿಸಿದರು.
ಎಸ್ ಎಸ್ ಎಲ್ ಸಿ ಪಿಯುಸಿ ಪದವಿ ಹಾಗೂ ವೃತ್ತಿಪರ ಕೋಶಗಳಲ್ಲಿ ಸಾಧನೆ ಮಾಡಿದ ಸಮಾಜದ 80 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
 ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
 ಕಾರ್ಯಕ್ರಮದಲ್ಲಿ  ಪ್ರಾಚಾರ್ಯರಾದ ಎಂ ಕೆ ದುರುಗಪ್ಪ ಉಪನ್ಯಾಸ ನೀಡಿದರು.
 ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯೆ ಅಂಬಿಕಾ ದೇವಿಂದ್ರಪ್ಪ, ಸೆರೆಗಾರ್ ನೇತ್ರಾವತಿ, ಮುಖಂಡರಾದ ಜೈ ಯೋಗಾನಂದ, ರಮೇಶ್ ವಕೀಲರು, ಕೆ ಉಡುಚಪ್ಪ, ಸೋಮಪ್ಪ ನಾಯಕ, ಯಮನೂರಪ್ಪ, ಮಲ್ಲಿಕಾರ್ಜುನ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಅಣಜಿ ಮೋಹನ್, ಮಾಜಿ ಅಧ್ಯಕ್ಷ ಟಿ ಸೋಮಶೇಖರ, ರಾಮಕೃಷ್ಣ, ಕವಿತಾ, ಇತರರಿದ್ದರು.
One attachment • Scanned by Gmail