ಪರಿಸರ ಸ್ನೇಹಿ ವೃಕ್ಷ ಗಣೇಶ ರಚನೆಕಾರ್ಯಗಾರ
* ಇಂದು ನಾಳೆ  ಗಣೇಶ ರಚನೆ
* ನಗರದ  ವಿವಿಧ ಶಾಲಾ ಕಾಲೇಜುಗಳ ಒಂದು ಸಾವಿರ ವಿದ್ಯಾರ್ಥಿಗಳು ಭಾಗಿ
* ಗಣೇಶ ರಚಿಸಿ ಈ ವರ್ಷದ ಪೂಜೆ
* ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ನಿಷೇಧಕ್ಕೆ ಸಹಕಾರಿ
* ರಸಾಯನಿಕ ಬಣರಹಿತ ಗಣೇಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.02: ಪರಿಸರ ಸ್ನೇಹಿ  ಮಣ್ಣಿನ ವೃಕ್ಷ ಗಣೇಶ ಮೂರ್ತಿ ರಚನೆಯ ಎರೆಡು ದಿನಗಳ  ಕಾರ್ಯಾಗಾರ ಬಳ್ಳಾರಿಯಲ್ಲಿ ಇಂದು ಆರಂಭಗೊಂಡಿದೆ.
ಅರಣ್ಯ ಇಲಾಖೆ ಬಳ್ಳಾರಿ ನಗರದ ಬೆಳಗಲ್ ಕ್ರಾಸ್ ನಲ್ಲಿರುವ ಪ್ರಕೃತಿ ಭವನದಲ್ಲಿ  ಈ ಕಾರ್ಯಾಗಾರ ಹಮ್ಮಿಕೊಂಡಿದೆ. ಇದಕ್ಕೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಚಾಲನೆ ನೀಡಿ. ಪರಿಸರಕ್ಕೆ ಮಾರಕವಾದ ಗಣೇಶ ಮೂರ್ತಿಗಳನ್ನು ಪೂಜಿಸದೆ. ಮಣ್ಣಿನ ಗಣೇಶಗಳನ್ನು ಮಾತ್ರ ಪೂಜಿಸಲು ಕರೆ ನೀಡಿದರು.
ಅರಣ್ಯ ಇಲಾಖೆಯ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಸಂದೀಪ್ ಪಾಟೀಲ್ ಅವರು ವರ್ಷ ದಿಂದ ವರ್ಷಕ್ಕೆ ಪರಿಸರಕ್ಕೆ ಹಾನಿಮಾಡುವ ಪಿಓಪಿ ಮಣ್ಣಿನ ಗಣೇಶ ಮೂರ್ತಿಗಲಕ ಬಳಕೆ ಹೆಚ್ಚುತ್ತಿದೆ. ಅದಕ್ಕೆ ಪರಿಸರ ಸ್ನೇಹಿಯಾದ ಮಣ್ಣಿನ ಗಣೇಶವನ್ನು ಮಕ್ಕಳು ಮನೆಯಲ್ಲೇ ರಚಿಸುವಂತಾಗಲು ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಒಂದು ಸಾವಿರ ಮಕ್ಕಳು ಇದರಲ್ಲಿ ಪಾಲ್ಗೊಳಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳಿಗೆ, ಸರ್ವಜನಿಕರಿಗೆ ಹರಿಹರದ ಕಲಾವಿದ ರಾಮು ಅವರು ಸುಲಭವಾಗಿ ಎರೆಡು ತಾಸಿನಲ್ಲಿ ಗಣೇಶನನ್ನು ರಚನೆ ಮಾಡುವುದು ಹೇಗೆ ಎಂಬುದನ್ನು ಕಾರ್ಯಾಗಾರದಲ್ಲಿ ಮಕ್ಕಳಿಗೆ ಸಾರ್ವಜನಿಕರಿಗೆ ತಿಳಿಸಿಕೊಡುತ್ತಿದ್ದಾರೆ.
ಯಾವುದೇ ಬಣ್ಣ ಬಳಕೆ ಇಲ್ಲ. ಅಲಂಕಾರಕ್ಕೆ ಕೆಲ ಬೀಜಗಳನ್ನು ಬಳಕೆ ಮಾಡಲಿದೆ. ಗಣೇಶ ತಯಾರಿಕೆಗೆ ಅಗತ್ಯವಾದ ಪರಿಕರಗಳನ್ನು ಇಲಾಖೆಯೇ ನೀಡಿದೆ.
ಗಣೇಶ ತಯಾರಿಕೆ ವೇಳೆ ಅದರ ಹಿಂಬದಿಯಲ್ಲಿ ಒಂದು ಬೀಜ ಇಡಲಾಗುತ್ತದೆ. ಅದರ ವಿಸರ್ಜನೆವೇಲಕೆ ಮಣ್ಣಿನ ಜೊತೆ ಬೀಜ ಬೆರೆತು ಗಿಡವಾಗಿ ಬೆಳೆಯಬೇಜೆಂಬ ಉದ್ದೇಶ ಹೊಂದಲಾಗಿದೆ.
ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿಕಲಚೇತನ ಕೊಟ್ರೇಶ್ ಸಂಜೆವಾಣಿಯೊಂದಿಗೆ ಮಾತನಾಡಿ. ನಾನು ಈವರೆಗೆ ಪ್ಲಾಸ್ಟರ್ ಆಫ್ ಪ್ಯಾರೀಶ್ ಗಣೇಶ್ ನನ್ನೆ ಇಟ್ಟು ಪೂಜೆ ಮಾಡುತ್ತಿತ್ತು. ಈ ಕಾರ್ಗಾರದಲ್ಲಿ ಮಣ್ಣಿನ ಗಣೇಶ ಮಾಡುವುದನ್ನು ಸುಲಭವಾಗಿ ಕಲಿತಿರುವೆ. ಇನ್ನು ಮುಂದೆ ಯಾವಾಗಲೂ ಮಣ್ಣಿನ ಗಣೇಶವನ್ನೆ ಪ್ರತಿಷ್ಟಾಪಿಸಲಿದೆಂದರು.
ಗಣೇಶನನ್ನು ರಚಿಸಿದ  ವಿದ್ಯಾರ್ಥಿಗಳು ಸಹ ಇಂತಹ ಕಾರ್ಯಾಗಾರ ನಮಗೆ ತುಂಬ ಸಹಕಾರಿಯಾಗಿದೆ. ಪರಿಸರಕ್ಕೆ ಪೂರಕವಾದ ಇಂತಹ ಮೂರ್ತಿಗಳ ರಚನೆ ಮಾಡಿದ್ದು ಖುಷಿಯಾಗಿದೆ. ಈ ವರ್ಷ ಇದೇ ಗಣೇಶನನ್ನು ನಮ್ಮ ಮನೆಯಲ್ಲಿ ಪೂಜೆ ಮಾಡಲಿದೆಂದರು.