ಅಹಿಂದ ಯುವ ಘಟಕದ  ಜಿಲ್ಲಾಧ್ಯಕ್ಷರಾಗಿ ಎಂ.ಜಿ ಕನಕ ನೇಮಕ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಸೆ.2: ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಸಮಾಜ ಸೇವಕ ಎಂ.ಜಿ.ಕನಕ ನೇಮಕಗೊಂಡಿದ್ದಾರೆ.
ಅಹಿಂದ ಜನ ಸಂಘದ ಜಿಲ್ಲಾಧ್ಯಕ್ಷ ಗೋನಾಳ್ ಎಂ.ತಿಮ್ಮಪ್ಪ ಅವರು ಈ ನೇಮಕ‌ಮಾಡಿ ಅಹಿಂದ ಸಮುದಾಯದ ಸಂಘಟನೆಗೆ ಸೂಚಿಸಿದ್ದಾರೆ.
ಅಹಿಂದ ಯುವ ಘಟಕದ ಜವಾಬ್ದಾರಿ ವಹಿಸಿಕೊಂಡ ಎಂ.ಜಿ ಕನಕ ಅವರು,  ನನ್ನ ಸಮಾಜಿಕ  ಸೇವೆ ಪರಿಗಣಿಸಿ ಈ ಸ್ಥಾನ ಕಲ್ಪಿಸಿರುವ ರಾಜ್ಯಾಧ್ಯಕ್ಷ ಅಯ್ಯಪ್ಪನಗೌಡ, ಜಿಲ್ಲಾಧ್ಯಕ್ಷ ಗೋನಾಳ್ ಎಂ.ತಿಮ್ಮಪ್ಪ  ಹಾಗೂ ಅಹಿಂದದ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು   ಒಟ್ಟುಗೂಡಿಸಿ ಅದರ  ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ.