ಪ್ರತಿಭಾ ಕಾರಂಜಿ ಕಾರ್ಯಕ್ರಮ
ಮುನವಳ್ಳಿ,ಸೆ2: ಪಟ್ಟಣದ ಜೆ.ಎಸ್.ಪಿ ಸಂಘದ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ. ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಪ್ರಾಥಮಿಕ ಶಾಲೆಗಳ ಮುನವಳ್ಳಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆ.ಎಸ್.ಪಿ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್.ಯಕ್ಕುಂಡಿ, ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ ಸೃಜನಾತ್ಮಕ ಕೌಶಲ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಸೋಮಶೇಖರಮಠದ ಮುರುಘೇಂದ್ರ ಶ್ರೀಗಳು ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮ ಎಲ್ಲ ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಜರುಗಿದಾಗ ಮಾತ್ರ ಮಕ್ಕಳ ಸುಪ್ತ ಪ್ರತಿಭೆ ಹೊರಹೊಮ್ಮಿಸಲು ಸಾಧ್ಯ ಎಂದರು.
ಸಮೂಹ ಸಂಪನ್ಮೂಲ ವೈಕ್ತಿ ನಾಗೇಶ ಹೊನ್ನಳ್ಳಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಬಿ.ಬಿ.ನಾವಲಗಟ್ಟಿ, ಮೋಹನ ಕಾಮಣ್ಣವರ, ಸುದೀರ ವಾಘೇರಿ, ಎಸ್.ಬಿ.ಹಿರಲಿಂಗನ್ನವರ, ಎಂ.ಎಮ್ ಕರೀಕಟ್ಟಿ, ಉಮೇಶ ನಾಗಪ್ಪಗೋಳ, ಎಂ.ಎಸ್.ಹೊಂಗಲ, ಗುರುನಾಥ ಪತ್ತಾರ, ಮಂಜುಳಾ ಮುರನಾಳ, ಎಂ.ಎಸ್.ಕೊಳಚಿ, ಜಿ.ಎಸ್.ಚಿಪ್ಪಲಕಟ್ಟಿ, ಎ.ಎಫ್.ಶ್ಯಾನಭೋಗ, ಮುಖ್ಯ ಶಿಕ್ಷಕ ಎಂ.ಎ.ಕಮತಗಿ ಇತರರು ಉಪಸ್ಥಿತರಿದ್ದರು.