ಪ್ರತಿಭಾ ಕಾರಂಜಿಯಲ್ಲಿ ಶಾಲಾ ಮಕ್ಕಳ ಸಾಧನೆ
ಬ್ಯಾಡಗಿ,ಸೆ.2: ತಾಲೂಕಿನ ಗುಂಡೇನಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳು ಮೋಟೆಬೆನ್ನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
5 ರಿಂದ 7ನೇ ತರಗತಿ ವಿಭಾಗದಲ್ಲಿ :
ಭವ್ಯಾ ರ್ಯಾವಣ್ಣನವರ -ಇಂಗ್ಲೀಷ್ ಕಂಠಪಾಠ, ಕನ್ನಡ ಕಂಠಪಾಠ ಹಾಗೂ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರತಿಭಾ ಸವಣೂರು -ಹಿಂದಿ ಕಂಠಪಾಠ ಹಾಗೂ ಕವಿತಾ ವಾಚನದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಗೀತ ಆನ್ವೇರಿ -ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪ್ರತಿಭಾ ಸವಣೂರ -ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಇಂಪನಾ ದೇಶಗತ್ತಿ -ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಾಲತೇಶಗೌಡ ಪಾಟೀಲ -ಚಿತ್ರಕಲೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಪ್ರವೀಣ ಲಮಾಣಿ -ಕ್ಲೇ ಮಾಡೆಲಿಂಗ್ ಸ್ಫರ್ಧೆಯಲ್ಲಿ ತೃತೀಯ ಸ್ಥಾನ, ಭಾರತಿ ತಳವಾರ -ಅಭಿನಯ ಗೀತೆ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

1 ರಿಂದ 4ನೇ ತರಗತಿ ವಿಭಾಗದಲ್ಲಿ:
ಭುವನೇಶ್ವರಿ ಆನ್ವೇರಿ -ಇಂಗ್ಲೀಷ್ ಕಂಠಪಾಠ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ, ವಿಜಯಲಕ್ಷ್ಮೀ ಪಾಟೀಲ -ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಹೇಮಂತ್ ನಾಯ್ಕ – ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವರ್ಷಿಣಿ ಮಾಳಗಿ -ದೇಶಭಕ್ತಿ ಗೀತೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ, ವರ್ಷಿಣಿ ಮಾಳಗಿ -ಕನ್ನಡ ಕಂಠಪಾಠ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಭುವನೇಶ್ವರಿ ಆನ್ವೇರಿ – ಆಶುಭಾಷಣ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ, ನಿಖಿತಾ ಯಲ್ಲಣ್ಣನವರ -ಕ್ಲೇ ಮಾಡೆಲಿಂಗ್ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಶಾಲಾ ಮಕ್ಕಳ ವಿಶೇಷ ಸಾಧನೆಗೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಗ್ರಾಮಸ್ಥರು ಮತ್ತು ಪಾಲಕರು ಅಭಿನಂದಿಸಿದ್ದಾರೆ.