“ಪರಂ ಜ್ಯೋತಿ” ಸಾಂಸ್ಕೃತಿಕ ಕಾರ್ಯಕ್ರಮ
ಹುಬ್ಬಳ್ಳಿ,ಸೆ2: ಚೆನ್ನಪೇಟ್ ಜಿಹೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ಜಾನಪದ ನೆರಳು, ಕಲೆ ಮತ್ತು ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರ, ಹುಬ್ಬಳ್ಳಿ ಸಹಯೋಗದಲ್ಲಿ “ಪರಂ ಜ್ಯೋತಿ” ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಧಾರವಾಡದ ಖ್ಯಾತ ಜನಪದ ಕಲಾವಿದರಾದ ಡಾ ಪ್ರಕಾಶ್ ಮಲ್ಲಿಗವಾಡರವರು ವಚನಗಳು ಹಾಗೂ ಜನಪದ ನೃತ್ಯಗಳು ಆಧುನಿಕ ಯುಗದಲ್ಲಿ ಜನತೆಗೆ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವ ಒಂದು ಶಿಕ್ಷಣದ ರೂಪವಾಗಿದೆ. ಮಾನವಿಯತೆ ಪರಂ ಜ್ಯೋತಿಯ ಬೆಳಕು ಎಲ್ಲರಲ್ಲೂ ಮೂಡಬೇಕಿದೆ ಎಂದರು. ಇನ್ನೊರ್ವ ಅತಿಥಿಗಳಾದ ದತ್ತಾತ್ರೇಯ ತಾಂಬೆ ಅವರು ಮಾತನಾಡಿದರು.
ಹುಬ್ಬಳ್ಳಿಯ ಯುವ ಜನಪದ ನೃತ್ಯ ಕಲಾವಿದರಾಗಿರುವ ಸಾಲಿಯಾನ್ ಸಂತೋಷರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಕಿಮನೆ ನೃತ್ಯ ಗುರುಕುಲದಿಂದ ನೃತ್ಯ ಪ್ರದರ್ಶನ ಅದ್ಭುತವಾಗಿ ಮೂಡಿ ಬಂದಿತು.