ಶ್ರೀ ರುದ್ರ ಪಾರಾಯಣ ಕಾರ್ಯಕ್ರಮ
ಲಕ್ಷ್ಮೇಶ್ವರ,ಸೆ2: ದುಃಖವನ್ನು ದೂರ ಮಾಡುವ ಶಕ್ತಿ ಶ್ರೀ ರುದ್ರ ಮಂತ್ರಕ್ಕೆ ಇದೆ ಎಂದು ಹೂವಿನಶಿಗ್ಲಿ ವೀರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಹತ್ತಿರವಿರುವ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಶ್ರೀ ಲಿಂಗೈಕ್ಯ ನಿರಂಜನ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಮತ್ತು ವೇದಮಾತಾ ರುದ್ರಾಣಿ ಬಳಗ ಶ್ರೀ ರುದ್ರ ಪಾರಾಯಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ, ಆಧ್ಯಾತ್ಮಿಕ ಕಡೆ ಒಲವು ಇದ್ದರೆ ಮನಸು ಶಾಂತ ರೀತಿಯಿಂದ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವವನ್ನು ಮಾತೃ ಶಕ್ತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ವೇದಮಾತಾ ಕವಿತಾ ಗುರಸಿದ್ದಯ್ಯ ಹಿರೇಮಠ ಹಾವೇರಿ ಸವಣೂರ ಲಕ್ಷ್ಮೇಶ್ವರ ಧಾರವಾಡ ಸುತ್ತಮುತ್ತಲಿನ ಶ್ರೀ ರುದ್ರ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾರಾಯಣ ಮಾಡಿದರು.
ಈ ಸಂದರ್ಭದಲ್ಲಿ ಸರೋಜಕ್ಕ ಬನ್ನೂರ ಶಿವಲಿಂಗಯ್ಯ ಹಿರೇಮಠ, ರೇಣುಗೌಡ್ರು ಪಾಟೀಲ್, ಶಿವಾನಂದ ಕಟ್ಟಿಮನಿ,ಸಿದ್ದಲಿಂಗಯ್ಯ ಹಿರೇಮಠ,ಉಮೇಶ್ ಮಾಗಡಿ, ಮಾಂತೇಶ ಬುಗುಟಿ, ಶಾಂತಪ್ಪ ರಾಮಗೇರಿ, ಪಿಎಚ್ ಪಾಟೀಲ್ ಭಕ್ತರು ಇದ್ದರು.